ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಶಕ್ತಿ ದೇವಿ ಸ್ಥಳವಾಗಿರುವ ಶ್ರೀ ಕರಿಕಾನ ಪರಮೇಶ್ವರಿ ದೇವಿ ಸನ್ನದಿಯಲ್ಲಿ ಮಂಗಳವಾರ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗಾಗಿ ಶ್ರೀಕುಮಾರ ಸಮೂಹ ಸಂಸ್ಥೆಯ ಅಧ್ಯಕ್ಷ ವೆಂಕ್ರಟಮಣ ಹೆಗಡೆ ಕವಲಕ್ಕಿ ಮುಂದಾಳತ್ವದಲ್ಲಿ ಚಂಡಿಕಾ ಹವನ ನೇರವೇರಿತು.
ಇದನ್ನೂ ಓದಿ : ಮತಯಂತ್ರದಲ್ಲಿ ಮರಾಠಿ ಭಾಷೆಯಲ್ಲೂ ಅಭ್ಯರ್ಥಿಗಳ ಹೆಸರು ಮುದ್ರಣ
ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಲಿ. ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ. ಬಿಜೆಪಿ ಬಹುಮತ ಪಡೆಯುವ ಅಧಿಕಾರದ ಚುಕ್ಕಾಣಿ ಹಿಡಿಯಲಿ ಎಂದು ಪ್ರಾರ್ಥಿಸಿ ಚಂಡಿಕಾ ಹವನ ನಡೆಯಿತು. ನಂತರ ಶ್ರೀ ಕರಿಕಾನಮ್ಮ ದೇವಿಗೆ ಪೂಜೆ ಸಲ್ಲಿಸಿ ವೇ. ಸುಬ್ರಹ್ಮಣ್ಯ ಭಟ್ ಪ್ರಾರ್ಥಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಸರಳತೆಯಿಂದ ಕೂಡಿದ ಅಪರೂಪದ ರಾಜಕಾರಣಿಯಾದ ಕಾಗೇರಿಯವರು ನಮ್ಮ ಕ್ಷೇತ್ರದ ಸಂಸದ ಸ್ಥಾನಕ್ಕೆ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇವರು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಅವರ ಅಭಿಮಾನಿಗಳು ಈ ದಿನ ಚಂಡಿಕಾ ಹವನದ ಮೂಲಕ ಕಾಗೇರಿ ಗೆಲುವಿಗಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಚಂಡಿಕಾ ಹವನದ ಮುಂದಾಳತ್ವ ವಹಿಸಿದ್ದ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ, ಕಾಗೇರಿಯವರು ಈ ಜಿಲ್ಲೆಯಿಂದ ಸಂಸತ್ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಏ.೧೭ರಂದು ತಾಲೂಕಿಗೆ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಪ್ರಸಾದ ವಿತರಿಸಿ ಪ್ರಚಾರ ನಡೆಸಲಿದ್ದಾರೆ ಎಂದರು.
ಜಿ.ಜಿ.ಶಂಕರ ಮಾತನಾಡಿ, ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ದಿಗ್ವಿಜಯ ಬಾರಿಸಲಿದೆ. ದೇಶದಲ್ಲಿ ಸನಾತನ ಆಚರಣೆಗೆ ಬಿಜೆಪಿ ಒತ್ತು ನೀಡಿದೆ. ಬಹುವರ್ಷದ ಕನಸಾಗಿದ್ದ ರಾಮಮಂದಿರ ಲೋಕಾರ್ಪಣೆಯಾಗಿದೆ. ಇನ್ನು ಹಲವು ಕಾರ್ಯವಾಗಬೇಕಿದೆ. ಈ ಬಾರಿ ಅದು ನೇರವೇರಲಿದೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ರಾಜ್ಯದ ಹೆಚ್ಚು ಸ್ಥಾನ ಗೆಲುವು ಸಾಧಿಸಬೇಕಿದೆ. ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿದ್ದು, ಕಾಗೇರಿ ಅಭಿಮಾನಿಗಳು ಇಂದು ಚಂಡಿಕಾ ಹವನ ನಡೆಸುವ ಮೂಲಕ ಪ್ರಾರ್ಥಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ, ಯೋಗಿಶ ಮೇಸ್ತ, ಸುರೇಶ ಹೊನ್ನಾವರ, ಆರ್.ಜಿ.ಹೆಗಡೆ, ಜಿ.ಜಿ.ಭಟ್, ಆರ್.ಎಮ್.ಹೆಗಡೆ , ಎಂ.ಎಸ್.ಹೆಗಡೆ ಕಣ್ಣಿ, ನಾರಾಯಣ ಹೆಗಡೆ, ಸೂರ್ಯನಾರಾಯಣ ಹೆಗಡೆ, ನಾಗೇಶ ನಾಯ್ಕ, ಸುಭಾಸ ಗೌಡ, ವಿ.ಎನ್.ಹೆಗಡೆ, ಜಿ.ವಿ.ಹೆಗಡೆ, ಶಂಭು ಹೆಗಡೆ ಸಂತಾನ್ ಮತ್ತಿತರರು ಇದ್ದರು.