ಕುಮಟಾ: ಪ್ರಸಕ್ತ ವರ್ಷ ಕುಮಟಾ ತಾಲೂಕಿನಲ್ಲಿ ೧೦ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಈ ಮಾಹಿತಿಯನ್ನು ಸ್ವತಃ ಆರೋಗ್ಯಾಧಿಕಾರಿ ಬಹಿರಂಗಪಡಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಕುಮಟಾ ತಾಪಂ ಸಭಾಭವನದಲ್ಲಿ ಶುಕ್ರವಾರ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಾಲೂಕಿನಲ್ಲಿ ವಿಪರೀತ ಮಳೆಯಿಂದ ಉಂಟಾಗುವ ಪ್ರವಾಹದ ಪರಿಸ್ಥಿತಿ ಅವಲೋಕಿಸುವುದರ ಕುರಿತು ಎಲ್ಲಾ ಇಲಾಖೆಗಳ ಅಧಿಕಾರಿಗಳು, ನೋಡಲ್ ಆಪೀಸರ್ ಹಾಗೂ ಪಿಡಿಓಗಳ ಸಭೆ ನಡೆದಿತ್ತು.

ಇದನ್ನೂ ಓದಿ : ಗುಡ್ನಕಟ್ಟು ಹೊಳೆಗೆ ಶಾಶ್ವತ ತಡೆಗೋಡೆ ನಿರ್ಮಿಸಿಕೊಡಿ

ಈ ಸಂದರ್ಭ ಮಾತನಾಡಿದ ತಾಲೂಕು ಅರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ತಾಲೂಕಿನಲ್ಲಿ ಜನವರಿಯಿಂದ ಜೂನ್ ವರೆಗೆ  ಕುಮಟಾ ತಾಲೂಕಿನಲ್ಲಿ ೧೦ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಬಹುತೇಕರು ಗುಣಮುಖರಾಗಿದ್ದಾರೆ. ಇಬ್ಬರು ಈಗಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಎಲ್ಲೆಡೆ ಡೆಂಗ್ಯೂ ಹರಡುತ್ತಿದೆ. ಇದನ್ನು ತಡೆಯಲು ಎಲ್ಲಾ ರೀತಿಯದ್ದಾದ ಕ್ರಮವನ್ನು ಆರೋಗ್ಯ ಇಲಾಖೆ ತೆಗೆದುಕೊಳ್ಳಬೇಕು ಎಂದು ಡಾ. ಆಜ್ಞಾ ನಾಯಕ ಅವರಿಗೆ ಸೂಚಿಸಿದರು. ಪ್ರವಾಹ ಹಾಗೂ ಡೆಂಗ್ಯು ನಿಯಂತ್ರಿಸುವುದರ ಕುರಿತು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ತಾಲೂಕಿನ ಕಂದಾಯ ಹಾಗೂ ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ದಿನಕರ ಶೆಟ್ಟಿ ಸೂಚಿಸಿದರು.

ಇದನ್ನೂ ಓದಿ : ಲಕ್ಷ್ಮಿಪ್ರಿಯಾ ಕೆ. ಉತ್ತರ ಕನ್ನಡದ ನೂತನ ಜಿಲ್ಲಾಧಿಕಾರಿ

ಮಳೆಯಿಂದ ತಾಲೂಕಿನಲ್ಲಿರುವ ಎಲ್ಲಾ ನದಿ, ಹಳ್ಳಗಳು ತುಂಬಿ ಹರಿಯುವ ಮೂಲಕ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದ ಜನರನ್ನು ರಕ್ಷಿಸುವುದರ ಕುರಿತು ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ಳುವಂತೆ ಸೂಚಿಸಿದರು. ಪ್ರವಾಹ ಬರುವ ಪ್ರದೇಶಗಳಲ್ಲಿರುವ ನೋಡಲ್ ಅಧಿಕಾರಿಗಳು ಹಾಗೂ ಪಿಡಿಓಗಳು ಸದಾ ಕಾಲ ಎಚ್ಚರಿದಿಂದ ಇರಬೇಕು. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಕಾಳಜಿಕೆಂದ್ರಕ್ಕೆ  ಕರೆತರಲು ದೋಣಿಗಳ ಅವಶ್ಯಕತೆ ಇದ್ದರೆ ಅದನ್ನು ಮುಂಜಾಗ್ರತ ಕ್ರಮವಾಗಿ ಆಯಾ ಸ್ಥಳಗಳಲ್ಲಿ ಸಿದ್ದ ಇಟ್ಟುಕೊಳ್ಳಬೇಕು. ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿಯಾದರೆ, ಮಳೆಯಿಂದ ಮನೆಗಳು ಬಿದ್ದರೆ ಅವುಗಳಿಗೆ ತಕ್ಷಣ ಪರಿಹಾರ ನೀಡಬೇಕು. ಗುಡ್ಡ, ಧರೆ ಭಾಗದಲ್ಲಿರುವ ಮನೆಗಳ ಜನರಿಗೆ ಎಚ್ಚರಿಕೆಯಿಂದ ಇರಲು ಹೇಳುವಂತೆ  ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ ಪ್ರವೀಣ, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ(ಪ್ರಭಾರ) ಆರ್.ಎಲ್.ಭಟ್ಟ ಇದ್ದರು.