ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್ ಚಾಲಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ !

ಇದನ್ನೂ ಓದಿ : ಉತ್ತರ ಕನ್ನಡ ಸಹಿತ ಹಲವೆಡೆ ಮುಂದಿನ 5 ದಿನ ಭಾರೀ ಮಳೆ

ಕೆಎಸ್​ಆರ್​ಟಿಸಿ ಬಸ್​ ಚಾಲಕರು ಹೆಚ್ಚುವರಿ ಡ್ಯೂಟಿ ಮಾಡುತ್ತಿದ್ದ ಹಿನ್ನೆಲೆ ಅಪಘಾತ ಪ್ರಕರಣಗಳು ನಡೆಯುತ್ತಿದ್ದವು. ಇದಕ್ಕೆ ಕಾರಣ ಹೆಚ್ಚುವರಿ ಡ್ಯೂಟಿ ಮತ್ತು ವಿಶ್ರಾಂತಿ ಇಲ್ಲದೇ ಇರುವುದು. ಇದೇ ಕಾರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡ ಕೆಎಸ್​ಆರ್​ಟಿಸಿ, ಬಸ್​ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡಿದೆ. ವಿಶ್ರಾಂತಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.

ಇದನ್ನೂ ಓದಿ : ಕೋವಿಡ್ ಸಮಯದಲ್ಲಿ ಸುರೇಶ ಅಂಗಡಿ ಮೃತದೇಹ ಊರಿಗೆ ತರಲು ಅವಕಾಶ ನೀಡಿಲ್ಲ

ಇಂದಿನಿಂದ ರಾತ್ರಿ ಮತ್ತು ದೂರದ ಪ್ರಯಾಣದ ನಂತರ ಚಾಲಕರು ವಿಶ್ರಾಂತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಎಂಟು ಗಂಟೆಗಳಿಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ. ಎಂಟು ಗಂಟೆಗಿಂತ ಅಧಿಕ ಮತ್ತು ರಾತ್ರಿ ವೇಳೆ ಹೆಚ್ಚುವರಿ ಡ್ಯೂಟಿ ಮಾಡಿದರೆ ನಾಲ್ಕೈದು ಗಂಟೆಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಬೇಕು. ವಾರದಲ್ಲಿ ಕೆಲಸದ ಅವಧಿ ೪೮ ಗಂಟೆ ದಾಟುವಂತಿಲ್ಲ ಎಂದು ಸೂಚಿಸಲಾಗಿದೆ.

ಈ ರೀಲ್ಸ್ ನೋಡಿ : ಭಟ್ಕಳದಲ್ಲಿ ಬಸ್-ಆಟೋ ಅಪಘಾತದ ದೃಶ್ಯ

ಕೆಎಸ್​ಆರ್​ಟಿಸಿ ಬಸ್​ಗಳಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಡಬಲ್ ಡ್ಯೂಟಿ ಮತ್ತು ರಾತ್ರಿ ವಿಶ್ರಾಂತಿಯನ್ನು ನೀಡದಿರುವುದರಿಂದ ನಿದ್ದೆಗೆಟ್ಟು ಬಸ್ ಚಲಾಯಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಮಿತಿಯು ಕೆಎಸ್​ಆರ್​ಟಿಸಿಗೆ ವರದಿ ಸಲ್ಲಿಸಿತ್ತು.

ಇದರ ಬೆನ್ನಲ್ಲೇ, ವರದಿ ಆಧರಿಸಿ ಕೆಎಸ್​ಆರ್​ಟಿಸಿ ಬಸ್ ಚಾಲಕರಿಗೆ ಡಬಲ್​ ಡ್ಯೂಟಿಗೆ ಬ್ರೇಕ್ ಹಾಕಿ ವಿಶ್ರಾಂತಿಗೆ ಅವಕಾಶ ನೀಡಲಾಗಿದೆ. ಇದರಿಂದ ಕೆಎಸ್ಆರ್​ಟಿಸಿ ಬಸ್​ಗಳ ಅಪಘಾತಗಳು ತಪ್ಪುತ್ತವೆ. ನೂರಾರು ಅಮಾಯಕರ ಪ್ರಾಣ ಉಳಿಸಲು ಸಹಾಯವಾಗಲಿದೆ.