ಸೊರಬ : ಕೆರೆಬೇಟೆ ಸಿದ್ಧತೆಯಲ್ಲಿ ಇರುವಾಗಲೇ ಕೆರೆಯಲ್ಲಿ ನೂರಾರು ಮೀನುಗಳು ಸಾವನ್ನಪ್ಪಿದ ಘಟನೆ  ತಾಲ್ಲೂಕಿನ ಗೆಂಡ್ಲ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ : ಭೀಕರ ಅಪಘಾತದಲ್ಲಿ ತಾಯಿ-ಮಗಳು ದುರ್ಮರಣ

ಗೆಂಡ್ಲ‌ ಗ್ರಾಮದ ಹೊಟ್ಟಕೇರಿ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಆಮ್ಲಜನಕದ ಕೊರತೆಯಿಂದ ಮೀನುಗಳು ಮೃತವಾಗಿರುವ ಶಂಕೆ ವ್ಯಕ್ತವಾಗಿದೆ. ಮೀನುಗಳು ಕೆರೆಯಲ್ಲಿ ತೇಲುತ್ತಿವೆ. ಕೆರೆಯಲ್ಲಿ‌ ಮೀನುಗಳು ಏಕಾಏಕಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಗೊಂದಲವನ್ನುಂಟು ಮಾಡಿದೆ.

ಇದನ್ನೂ ಓದಿ : ಕಿತ್ತೂರು ಚನ್ನಮ್ಮಗೆ ಸಾಮ್ರಾಜ್ಯಶಾಹಿ ಮನೋಭಾವ ಇರಲಿಲ್ಲ: ಡಾ. ಗಜಾನನ ನಾಯ್ಕ

ಕೆರೆಗೆ ಕಳೆದ ಮಳೆಗಾಲದಲ್ಲಿ 50 ಸಾವಿರ ಮೀನಿನ‌ ಮರಿಗಳನ್ನು ಬಿಡಲಾಗಿತ್ತು.‌ ಇನ್ನು  ಶನಿವಾರ ಕೆರೆಬೇಟೆ ನಡೆಸಲು ಮುಂದಾಗಿದ್ದ ಗ್ರಾಮಸ್ಥರಿಗೆ ಏಕಾಏಕಿ ಕೆರೆಯಲ್ಲಿದ್ದ ಮೀನುಗಳ‌ ಸಾವು ಕಂಗಾಲಾಗಿಸಿದೆ.
ಇನ್ನು ಕೆರೆಯಲ್ಲಿ ಮೀನುಗಳ ಸಾವನ್ನು ಗಮನಿಸಿದ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಆಮ್ಲಜನಕ ಕೊರತೆಯಿಂದ ಮೀನುಗಳ ಮರಣವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ಮಾಹಿತಿ ಸಿಗುವವರೆಗೆ ಕೆರೆಯಲ್ಲಿ ಮೀನು ಹಿಡಿಯದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಈ ವಿಡಿಯೋ ನೋಡಿ : ಸರ್ಕಾರಿ ನೌಕರರ ವಾಲಿಬಾಲ್ ಪಂದ್ಯಾವಳಿ  https://fb.watch/qwd955wrUm/?mibextid=Nif5oz