ಭಟ್ಕಳ: ರಾತ್ರಿ ವೇಳೆ ಕೊಟ್ಟಿಗೆಗೆ ನುಗ್ಗಿದ ಚಿರತೆಯೊಂದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರು ಹೊತ್ತೊಯ್ದ ಘಟನೆ ಮಾರುಕೇರಿಯ ಪಂಚಾಯತ ವ್ಯಾಪ್ತಿಯ ಹೂತ್ಕಳದಲ್ಲಿ ನಡೆದಿದೆ.
ಇದನ್ನೂ ಓದಿ : ಗಾಳಿಮಳೆಗೆ ಹಲವೆಡೆ ಮರ ಬಿದ್ದು ಹಾನಿ
ಕೃಷ್ಣ ದುರ್ಗಪ್ಪ ನಾಯ್ಕ ಎನ್ನುವವರಿಗೆ ಸೇರಿದ ಜಾನುವಾರು ಆಗಿದೆ. ಶುಕ್ರವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಶುಕ್ರವಾರ ಬೆಳಿಗ್ಗೆ ತಾಯಿ ಕಳೆದುಕೊಂಡ ಕರು ಕೂಗುತ್ತಿರುವುದನ್ನು ಗಮನಿಸಿದ ಮಾಲೀಕ ಕೊಟ್ಟಿಗೆಗೆ ಬಂದು ನೋಡಿದರು. ಕೊಟ್ಟಿಗೆಯಲ್ಲಿ ಜಾನುವಾರು ಇಲ್ಲದೆ ಇರುವುದನ್ನು ನೋಡಿ ಸುತ್ತಮುತ್ತ ಹುಡುಕಾಡಿದ್ದಾರೆ. ಬಳಿಕ ಅಲ್ಲೇ ಸ್ವಲ್ಪ ದೂರದಲ್ಲಿ ಚಿರತೆ ಅರ್ಧಂಬರ್ಧ ತಿಂದು ಬಿಟ್ಟ ಜಾನುವಾರು ಮೃತದೇಹ ಪತ್ತೆಯಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸುದ್ದಿ ತಿಳಿದು ಮಾರುಕೇರಿ ಪಂಚಾಯತ ಅಧ್ಯಕ್ಷೆ ನಾಗವೇಣಿ ಗೊಂಡ ಹಾಗೂ ಉಪಾಧ್ಯಕ್ಷ ಎಂ.ಡಿ ನಾಯ್ಕ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.