ಭಟ್ಕಳ: ಕ್ರೀಡೆ ಮಾನವನ ವಿಕಸನದೊಂದಿಗೆ, ಏಕತೆಯ ಪ್ರತೀಕವಾಗಿದೆ. ಇಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಇದನ್ನೂ ಓದಿ : ತೆಂಗಿನಗುಂಡಿಯಲ್ಲಿ ಮತ್ತೆ ಹಾರಾಡಿದ ಭಗವಾಧ್ವಜ

ವಿಡಿಯೋ ಕೂಡ ನೋಡಿ :  https://fb.watch/qBLlcD2YaV/?mibextid=Nif5oz

ಅವರು ಭಟ್ಕಳ ತಾಲೂಕಿನ ಕೆಕ್ಕೋಡನಲ್ಲಿ ಮಾರ್ಚ ೨ರ ರಾತ್ರಿ ಶ್ರೀ ಜೈನ್ ಕುದುರೆ ಬೀರಪ್ಪ ಮರಾಠಿ ಯುವಕ ಮಂಡಲ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಂಬ್ರಿ ಮರಾಠಿ ಸಮಾಜದ ಕಬ್ಬಡ್ಡಿ ಪಂದ್ಯಾಟದಲ್ಲಿ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಾ ಹೇಳಿದರು.

ಯುವ ಜನಾಂಗವು ದುಶ್ಚಟಕ್ಕೆ ಬಲಿಯಾಗದೆ, ಸಾಮಾಜಿಕ ಜಾಗೃತಿಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಜಾತಿ, ಮತ ಮತ್ತು ಧರ್ಮ ಮೀರಿದ್ದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ ಮಾತನಾಡುತ್ತಾ, ಕುಂಬ್ರಿ ಮರಾಠಿ ಸಮಾಜವು ಮುಂದಿನ ದಿನಗಳಲ್ಲಿ ರಾಜಕೀಯ ಮೀಸಲಾತಿ ಮತ್ತು ಬುಡಕಟ್ಟು ಪಂಗಡಕ್ಕೆ ಸೇರಿಸುವಂತೆ ಹೋರಾಟ ಮುಂದುವರೆಸಲಾಗುವುದು ಎಂದರು.


ವೇದಿಕೆಯ ಮೇಲೆ ಯುವಕ ಮಂಡಲದ ಅಧ್ಯಕ್ಷ ಶ್ರೀಧರ ನಾಗರಾಜ ಮರಾಠಿ, ಕಾರ್ಯಾಧ್ಯಕ್ಷ ಈಶ್ವರ ಮಾರು ಮರಾಠಿ, ಚನ್ನಯ್ಯ ತಿಮ್ಮ ಮರಾಠಿ, ಕೃಷ್ಣ ದೇವು ಮರಾಠಿ, ವಾಸು ಮಾದೇವ ಮರಾಠಿ, ಉದಯ ಶೇಷ ಮರಾಠಿ ಮುಂತಾದವರು ಉಪಸ್ಥಿತರಿದ್ದರು.