ಭಟ್ಕಳ: ಇಲ್ಲಿನ ಬಂದರಿನಲ್ಲಿರುವ ಖಾರ್ವಿ ಸಮಾಜದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟ್ಯವಿದೆ. ಇವರ ಹೋಳಿಯಾಟವನ್ನು ಕಾಣಲು ಜನ ಗುಂಪುಗುಂಪಾಗಿ ಸೇರುವುದೂ ವಿಶೇಷ.
ಈ ರೀಲ್ಸ್ ನೋಡಿ : ಭಟ್ಕಳ ಬಂದರಿನಲ್ಲಿ ಹೋಳಿ ಸಂಭ್ರಮ
ಖಾರ್ವಿ ಸಮುದಾಯವು ಹೋಳಿ ಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುತ್ತಾರೆ. ಪ್ರತಿ ವರ್ಷವೂ ಖಾರ್ವಿ ಸಮಾಜದ ಒಂದು ಕುಟುಂಬದವರು ಹರಕೆ ಹೊರುತ್ತಾರೆ. ಹರಕೆಯ ನಿಯಮದಂತೆ ಮೊದಲ ದಿನ(ನಿನ್ನೆ) ಅವರ ಮನೆಯಿಂದ ಒಂದು ಅಡಕೆ ಮರವನ್ನು ಸಮಾಜದವರೆಲ್ಲರೂ ಸೇರಿ ತರಲಾಯಿತು. ವಾದ್ಯಗಳೊಂದಿಗೆ ಕುಣಿತಗಳನ್ನು ಹಾಕುತ್ತ ಅಡಕೆಮರವನ್ನ ಹಾರಿಸುತ್ತ ಮೆರವಣಿಗೆ ಮೂಲಕ ಕಡಲತೀರಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ಜೈಕಾರ ಹಾಕುತ್ತಾ ಸಾಗುವುದು ಆಕರ್ಷಕವಾಗಿತ್ತು. ಈ ಮಧ್ಯೆ ವೇಷಧಾರಿಗಳು ಮೆರವಣಿಗೆಗೆ ಮೆರುಗು ನೀಡಿದರು. ಮಹಿಳೆಯರು, ಪುರುಷರು ಎನ್ನದೇ ಎಲ್ಲರೂ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಪಟ್ಟರು.
ಇದನ್ನೂ ಓದಿ : ಪ್ರಾಣಿ-ಪಕ್ಷಿಗಳಿಗೆ ನೀರುಣಿಸಿ ಮಾನವೀಯತೆ ಮೆರೆದ ರೈತ
ಇಂದು ಎರಡನೇ ದಿನದ ಆಚರಣೆ ಮತ್ತಷ್ಟು ಕಳೆಗಟ್ಟಿತ್ತು. ಡಿಜೆ, ಛದ್ಮವೇಶ ಸೇರಿದಂತೆ ರಾವಣ ಮತ್ತು ಶ್ರೀರಾಮನ ಬ್ರಹತ್ ಪ್ರತಿಕೃತಿಯನ್ನು ಮೆರವಣಿಗೆಯೊಂದಿಗೆ ತರಲಾಯಿತು. ಯುವಕ ಯುವತಿಯರು ಡಿಜೆ ಸದ್ದಿಗೆ ಡಾನ್ಸ್ ಮಾಡುತ್ತಾ ಪರಸ್ಪರ ಬಣ್ಣ ಎರಚಿಕೊಳ್ಳತ್ತಾ ತಲಗೋಡ್ ಕಡಲ ತೀರವನ್ನು ತಲುಪಿದರು. ಮೊದಲೇ ಒಟ್ಟುಗೂಡಿಸಿಕೊಂಡಿದ್ದ ತೆಂಗಿನ ಗರಿಯನ್ನು ಜೋಡಿಸಿಟ್ಟು, ಸಮಾಜದ ಹಿರಿಯರು ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಕಾಮದಹನವನ್ನು ಮಾಡಲಾಯಿತು.
ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?
ಸಾವಿರ ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಈ ವಿಶಿಷ್ಟ ಆಚರಣೆಯನ್ನು ನೋಡಿ ಪುಳಕಿತರಾದರು. ನೆರೆದಿದ್ದ ಜನರು ಸಮುದ್ರದಲ್ಲಿ ಪುಣ್ಯ ಸ್ನಾನ ಮಾಡಿ ಪಾವನರಾದರು.