ಭಟ್ಕಳ : ಖಾಸಗಿ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಗಾಯಗೊಂಡ ಘಟನೆ ನಗರದ ಸಂಶುದ್ದೀನ್ ವೃತ್ತದ ಬಳಿ ಪೆಟ್ರೋಲ್ ಬಂಕ್ ಎದುರು ನಡೆದಿದೆ.

ಬ್ರೇಕಿಂಗ್ ವಿಡಿಯೋ ನೋಡಿ : ಭಟ್ಕಳದಲ್ಲಿ ಖಾಸಗಿ ಬಸ್- ಆಟೋ ನಡುವೆ ಡಿಕ್ಕಿ

ಗಾಯಗೊಂಡ ಆಟೋ ಚಾಲಕನನ್ನು ಇಲ್ಲಿನ ಮಾಸ್ಟರ್ ಕಾಲೋನಿ‌ ನಿವಾಸಿ ಸುಹೇಲ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದಿಂದ ಕೊಲ್ಲೂರು ಮಾರ್ಗದಿಂದ ಬಂದ ಖಾಸಗಿ ಬಸ್ ಮತ್ತು ರಂಗಿನಕಟ್ಟೆ ಕಡೆಯಿಂದ ಬರುತ್ತಿದ್ದ ಆಟೋ ನಡುವೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಆಟೋ ಮುಂಭಾಗ ಜಖಂಗೊಂಡಿದೆ.

ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?

ಗಾಯಾಳು ಚಾಲಕನನ್ನು ಸ್ಥಳೀಯರು ತಕ್ಷಣ ಇನ್ನೊಂದು ಆಟೋದಲ್ಲಿ ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ಕುಂದಾಪುರಕ್ಕೆ ರವಾನಿಸಲಾಗಿದೆ. ಭಟ್ಕಳ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ರೈಲಿಗೆ ತಲೆ ಕೊಟ್ಟ ಅಪರಿಚಿತ ಸಾವು