ಭಟ್ಕಳ: ಇಲ್ಲಿನ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗವು ತನ್ನ ವಿದ್ಯಾರ್ಥಿಗಳ ವೇದಿಕೆ ಟೆಕ್ನೋವೇಟ್‌ ಸಹಯೋಗದೊಂದಿಗೆ ಗಿಟ್ ಮತ್ತು ಗಿಟ್ ಹಬ್ ಕುರಿತು ಪ್ರಾಯೋಗಿಕ ಕಾರ್ಯಾಗಾರ ಆಯೋಜಿಸಿತ್ತು.

ಇದನ್ನೂ ಓದಿ :  ಬ್ಯಾಂಕಿಗೆ ಕನ್ನ ಹಾಕಿದ ಇಬ್ಬರು ಯುವಕರು

ಕಾಲೇಜಿನ ಹಳೆಯ ವಿದ್ಯಾರ್ಥಿ ಆಕಿಫ್ ಅಶರ್ ಖಾನ್ ಕಾರ್ಯಾಗಾರ ಮುನ್ನಡೆಸಿದರು. ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಗಿಟ್ ಬಳಸಿಕೊಂಡು ಕೋಡ್‌ನಲ್ಲಿ ಬದಲಾವಣೆಗಳನ್ನು ಹೇಗೆ ಟ್ರ್ಯಾಕ್ ಮಾಡುವುದು, ಗಿಟ್ ಹಬ್ ನಲ್ಲಿ ತಂಡದ ಸದಸ್ಯರೊಂದಿಗೆ ಪರಿಣಾಮಕಾರಿಯಾಗಿ ಹೇಗೆ ಸಹಕರಿಸುವುದು ಮತ್ತು ಆವೃತ್ತಿ ನಿಯಂತ್ರಣವನ್ನು ಹೇಗೆ ನಿರ್ವಹಿಸುವುದು ಎಂದು ಕಲಿತರು. ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು ಇಲ್ಲಿ ಒತ್ತಿ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ಶಾನಭಾಗ ಅವರು ಆಕಿಫ್ ಅಶರ್ ಖಾನ್ ಅವರ ಕೊಡುಗೆಗಾಗಿ ಅಭಿನಂದಿಸಿದರು. ಪ್ರಾಂಶುಪಾಲ ಡಾ. ಫಜಲುರ್ ರೆಹಮಾನ್ ಹಾಗೂ ರೆಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ಸಂಸ್ಥೆಯ ಬೆಳವಣಿಗೆಗೆ ಹಳೆಯ ವಿದ್ಯಾರ್ಥಿಗಳ ನಿರಂತರ ಬೆಂಬಲ ಮತ್ತು ಕೊಡುಗೆಗಳನ್ನು ಸ್ಮರಿಸಿದರು. ಪ್ಲೇಸ್ಮೆಂಟ್ ಆಫೀಸರ್ ಪ್ರೊ. ಶ್ರೀಶೈಲ ಭಟ್ಟ ವಿದ್ಯಾರ್ಥಿಗಳ ಸಾಮರ್ಥ್ಯಗಳ ಅಭಿವೃದ್ಧಿಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಹಳೆಯ ವಿದ್ಯಾರ್ಥಿಗಳ ಸಹಕಾರ ಅಪೇಕ್ಷಿಸಿದರು.