ಭಟ್ಕಳ : ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬೇಂಗ್ರೆ ಗ್ರಾಮ ಪಂಚಾಯತ ಉಪಾಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆ ಪರಿಶೀಲನೆಗೆ ತೆರಳಿದ ವೇಳೆ ಓರ್ವ ಮಹಿಳೆ ಸೇರಿ ಮೂವರು ಹಲ್ಲೆ ನಡೆಸಿರುವ ಘಟನೆ ಮಾವಿನಕಟ್ಟಾ ಕೋಕ್ತಿ ರಸ್ತೆಯಲ್ಲಿ ನಡೆದಿದೆ.
ಬೇಂಗ್ರೆ ಗ್ರಾಮ ಪಂಚಾಯತ ವ್ಯಾಪ್ತಿಯ “ಮಾವಿನಕಟ್ಟಾ-ಕೋಕ್ತಿ ರಸ್ತೆಯ ಕೋಕ್ತಿಯಲ್ಲಿ ಹಾದು ಹೋದ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಅಲ್ಲಿನ
ಸಾರ್ವಜನಿಕರಿಂದ ದೂರು ಅರ್ಜಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ ಉಪಾಧ್ಯಕ್ಷ ಗೋವಿಂದ ಮಾದೇವ ನಾಯ್ಕ ಅವರು ಪಂಚಾಯತ ಅಭಿವೃದ್ಧಿ ಅಧಿಕಾರಿ ಜೊತೆ ಶುಕ್ರವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಮಾವಿಕಟ್ಟಾ-ಕೋಕ್ತಿ ರಸ್ತೆಯ ಕೋಕ್ತಿಗೆ ತೆರಳಿದ್ದರು.
ಇದನ್ನೂ ಓದಿ : ಅಕ್ರಮವಾಗಿ ಜಾನುವಾರು ಸಾಗಾಟ; ೧ ಆಕಳು, ೩ ಹೋರಿ ರಕ್ಷಣೆ
ಇದೇ ವೇಳೆ ಅಲ್ಲಿ ರಸ್ತೆ ಬದಿಯಲ್ಲಿ ಕಲ್ಲನ್ನು ಕಟ್ಟುತ್ತಿದ್ದ ಆರೋಪಿತರಾದ ದೇವರಾಜ ಈಶ್ವರ ನಾಯ್ಕ, ಗುರು ಈಶ್ವರ ನಾಯ್ಕ ಮತ್ತು ಸುಶೀಲಾ ಈಶ್ವರ ನಾಯ್ಕರಿಗೆ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡಬೇಡಿ ಎಂದು ಪಂಚಾಯತ ಉಪಾಧ್ಯಕ್ಷ ಗೋವಿಂದ ನಾಯ್ಕ ತಿಳಿ ಹೇಳಿದ್ದಾರೆ. ಆಗ ಆರೋಪಿತರಾದ ದೇವರಾಜ ಮತ್ತು ಗುರು ಕೋಪಗೊಂಡು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನೀನು ಯಾರು ನಮಗೆ ಹೇಳಲು? ನೀನು ನಮ್ಮಂತೆಯೇ ಸಾಮಾನ್ಯ, ನೀನು ನಮ್ಮಿಂದಲೆ ಆರಿಸಿ ಹೋಗಿದ್ದು ಎಂದು ಹೇಳುತ್ತಾ ಒಮ್ಮೆಲೆ ಏಕಾಏಕಿ ಮೈಮೇಲೆ ಏರಿ ಬಂದಿದ್ದಾರೆ. ಕೈಯಿಂದ ಉಪಾಧ್ಯಕ್ಷ ಗೋವಿಂದ ತಲೆಯ ಭಾಗಕ್ಕೆ ದೇವರಾಜ ಹಲ್ಲೆ ಮಾಡಿದ್ದಾರೆ. ಬಳಿಕ ಗುರು ಕೂಡ ಕೈಯಿಂದ ಗೋವಿಂದ ಅವರ ಬಲ ಭುಜದ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ತಪ್ಪಿಸಿಕೊಳ್ಳಲು ಮುಂದಾದಾಗ ಅವರಿಬ್ಬರೂ ತಮನ್ನು ಕೊಲೆ ಮಾಡುವ ಉದ್ದೇಶದಿಂದ ತಮ್ಮ ತಲೆಯನ್ನು ಹಿಡಿದು ಮಗನೇ ನಿನ್ನನ್ನು ಸಾಯಿಸಿಯೇ ಬಿಡುತ್ತೇವೆ ಎಂದು ಹೇಳುತ್ತಾ ನನ್ನ ತಲೆಯನ್ನು ಕಾಂಕ್ರೀಟ್ ರಸ್ತೆಗೆ ಬಲವಾಗಿ ಜಜ್ಜಿ ಗಾಯ ಪಡಿಸಿದ್ದಾರೆ ಎಂದು ಗೋವಿಂದ ನಾಯ್ಕ ಆರೋಪಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇದೇ ವೇಳೆ ಸುಶೀಲಾ ಈಶ್ವರ ನಾಯ್ಕ ಕೂಡ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ದೇವರಾಜ ಮತ್ತು ಗುರು ಇಬ್ನರೂ ಮಗನೇ ನನ್ನ ತಾಯಿಯನ್ನು ಮುಟ್ಟಿದ್ದೀಯಾ ನಿನ್ನ ಮೇಲೆ ಕಂಪ್ಲೇಂಟ್ ಕೊಡುತ್ತೇವೆ, ಮತ್ತೊಮ್ಮೆ ಜಾಗಕ್ಕೆ ಬಂದು ನೋಡು ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಎಂದು ಜೀವ ಬೇದರಿಕೆ ಹಾಕಿದ್ದಾರೆ ಎಂದು ಬೇಂಗ್ರೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಗೋವಿಂದ ಮಾದೇವ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮುರುಡೇಶ್ವರ ಪೋಲಿಸ ಠಾಣೆಯಲ್ಲಿ ದೂರು ದಾಖಲಾಗಿದೆ