ಭಟ್ಕಳ : ತಾಲೂಕಿನ‌ ಪಟ್ಟಣ ಪಂಚಾಯತ್ ಸದಾ ಒಂದಿಲ್ಲೊಂದು ವಿವಾದದಲ್ಲೇ ಇರುತ್ತದೆ. ಸಾಮಾನ್ಯವಾಗಿ ಮಳೆಯ ನೀರು ಚರಂಡಿಯಲ್ಲಿ ಹರಿದು ಹೋಗುತ್ತದೆ. ಆದರೆ, ಜಾಲಿ ಪಟ್ಟಣ ಪಂಚಾಯತ್ ಮಾತ್ರ ಇದಕ್ಕೆ ತದ್ವಿರುದ್ಧ. ಮಳೆ ಬಂತೆಂದರೆ ಸಾಕು, ನೀರು ಚರಂಡಿ ಗೆ ಹರಿಯದೇ ರಸ್ತೆಯಲ್ಲಿ ಹರಿಯುವುದು ಇಲ್ಲಿನ ವಿಶೇಷ !

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

 ಕಲ್ಲು ಅಡ್ಡಲಾಗಿರುವುದರಿಂದ ಚರಂಡಿಯಲ್ಲಿ ನೀರು ನಿಂತಿರುವುದು

ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತಿರುಗಾಡಿದರೆ ಮಳೆಯ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿ ಹರಿದು ಅಕ್ಕಪಕ್ಕದ ಮನೆಗಳಿಗೆ ನುಗ್ಗುವುದು ಕಾಣಸಿಗುತ್ತದೆ. ಇದಕ್ಕೊಂದು ಮತ್ತೊಂದು ತಾಜಾ ನಿದರ್ಶನ ಇಲ್ಲಿದೆ.

ಇದನ್ನೂ ಓದಿ : ರಸ್ತೆ ದುರಸ್ತಿಗೆ ಮುಂದಾದ ಸಾರ್ವಜನಿಕರು !

ಚರಂಡಿಯಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿರುವುದು

ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿ ಪೂರ್ವ ಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿ ಕಾಣಸುತ್ತದೆ. ಜಾಲಿ ಮಹಾಸತಿ ದೇವಸ್ಥಾನದಿಂದ ರಾಮ ನಾಯ್ಕ ಮನೆವರೆಗಿನ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಈ ರಸ್ತೆಯ ಪಕ್ಕದ ಚರಂಡಿ ಕಾಮಗಾರಿ ಮಾಡುವಾಗ ಚರಂಡಿ ಮಧ್ಯದ ಬೃಹತ್ ಕಲ್ಲನ್ನು ತಗೆಯದೆ ಇರುವದರಿಂದ ರಸ್ತೆ ಮೇಲೆ ನೀರು ಹರಿಯುವಂತಾಗಿದೆ.

ಇದನ್ನೂ ಓದಿ : ಕಡವಿನಕಟ್ಟೆ, ಕಂಡೆಕೋಡ್ಲು, ವೆಂಕಟಾಪುರ ಅಭಿವೃದ್ಧಿಗಾಗಿ ಗ್ರಾಮಸ್ಥರ ಮನವಿ

ಚರಂಡಿಯ ನೀರು ಖಾಸಗಿ ಜಮೀನಿಗೆ ನುಗ್ಗುತ್ತಿರುವುದು

ಚರಂಡಿಯಲ್ಲಿ ನೀರು ಹೋಗದೆ ಕಾಂಕ್ರಿಟ್ ರಸ್ತೆ ಮೇಲೆ ಹಾದು ಹೋಗಿದೆ. ಪರಿಣಾಮ ಪಕ್ಕದಲ್ಲೇ ಇದ್ದ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟು ಮಾಡಿದೆ. ಮನೆಯ ಜಾಗ ಹೊಯ್ಗಿ ಮಿಶ್ರಿತ ಭೂಮಿ ಅಗುವುದರಿಂದ ಕುಸಿತದ ಅಪಾಯ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಲೋಕ ಕಲ್ಯಾಣಕ್ಕಾಗಿ ಚಾತುರ್ಮಾಸ್ಯ : ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಕಾಮಗಾರಿ ಮಾಡಿರುವ ಕುಂದಾಪುರದ ನಾಗಯ್ಯ ಶೆಟ್ಟಿಯವರಿಗೆ ೮ ಬಾರಿ ಗಮನಕ್ಕೆ ತಂದಿದ್ದೇವೆ. ೩ ಸಲ ಪಟ್ಟಣ ಪಂಚಾಯತಗೆ ದೂರಿದ್ದೇವೆ. ಆದರೆ, ಯಾರೂ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರಾದ ವೆಂಕಟಪ್ಪ ನಾಯ್ಕ, ರಾಮ ಖಾರ್ವಿ, ಯೋಗೇಶ್ ನಾಯ್ಕ, ಪುರಷೋತ್ತಮ ಮೊಗೇರ ಮತ್ತಿತರರು ಆರೋಪಿಸಿದ್ದಾರೆ.

ಇದನ್ನೂ ಓದಿ : ಪದೇಪದೇ ರಸ್ತೆ ಅಗೆತಕ್ಕೆ ಸಾರ್ವಜನಿಕರ ಆಕ್ರೋಶ

ಇದನ್ನೂ ಓದಿ : ಹಿಂದೂ ಕಾಲೋನಿಗೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ