ಚಿಕ್ಕಮಗಳೂರು: ಅಭ್ಯರ್ಥಿ ಆದವರು ಚುನಾವಣಾ ಖರ್ಚಿಗೆ ಕೋಟಿಗಟ್ಟಲೆ ಹಣ ವ್ಯಯಿಸುತ್ತಾರೆ. ಚುನಾವಣೆಗಳಲ್ಲಿ ನಾನಾ ತೆರನಾದ ಆಮಿಷಗಳನ್ನು ಒಡ್ಡಿ ಮತದಾರರನ್ನು ಸೆಳೆಯುವ ಹುನ್ನಾರ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾಡೋದನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಮತದಾರರು ಕೂಡ ಕುಕ್ಕರ್, ಸೀರೆ, ಟಿಫಿನ್ ಬಾಕ್ಸ್ ಮತ್ತಿತರ ಕೊಡುಗೆಗಾಗಿ ಗಲಾಟೆ ಮಾಡೋದು ವರದಿ ಆಗ್ತಾನೇ ಇದೆ.
ಇದನ್ನೂ ಓದಿ : ನಮ್ಮೂರ ಸಾಧಕ-ನಮ್ಮ ಹೆಮ್ಮೆ: Ezone / ಈಝೋನ್ ಎಲೆಕ್ಟ್ರಿಕ್ ವಾಹನ : ಭಟ್ಕಳದ ಯುವಕನ ಸಾಧನೆ
ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಪ್ರತೀ ಚುನಾವಣೆಯ ಸಂದರ್ಭದಲ್ಲೂ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಆದರೆ ಇವೆಲ್ಲದರ ಹೊರತಾಗಿಯೂ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ವಿವಿಧ ತೆರನಾದ ಉಡುಗೊರೆ, ಕೊಡುಗೆ, ಹಣ, ಮದ್ಯ, ಮಾದಕ ವಸ್ತು ಗಳನ್ನು ಹಂಚುವ ಮೂಲಕ ರಂಗೋಲಿ ಅಡಿಗೆ ನುಸುಳುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಆದರೆ, ಇಲ್ಲೊಬ್ಬ ಮತದಾರ ಚುರುಮುರಿ ಮಾರಿ ಕೂಡಿಟ್ಟ ಹಣವನ್ನು ಚುನಾವಣೆ ಖರ್ಚಿಗೆಂದು ಅಭ್ಯರ್ಥಿಗೆ ನೀಡಿದ್ದಾನೆ.
ಈ ವಿಡಿಯೋ ನೋಡಿ : ಷೋಡಶ ಪವಿತ್ರ ನಾಗಮಂಡಲೋತ್ಸವ https://fb.watch/q_3d5QUiOE/?mibextid=Nif5oz
ಹೌದು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಚುರುಮುರಿ ವ್ಯಾಪಾರಿಯೊಬ್ಬರು ಚುನಾವಣಾ ಖರ್ಚಿಗೆ 25 ಸಾವಿರ ರುಪಾಯಿ ನೀಡಿದ್ದಾರೆ.
ಶುಕ್ರವಾರ ನಗರದ ವಿವಿಧೆಡೆ ಪೂಜಾರಿ ಅವರು ಮತಯಾಚನೆ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಇಲ್ಲಿನ ತೇಗೂರು ವೃತ್ತಕ್ಕೆ ಹೋಗಿದ್ದ ಸಂದರ್ಭದಲ್ಲಿ ಚುರುಮುರಿ ವ್ಯಾಪಾರಿ ಲೋಕೇಶ್ ಅವರು ಎಲೆ, ಅಡಿಕೆ, ಬಾಳೆ ಹಣ್ಣುಗಳ ತಾಂಬೂಲದೊಂದಿಗೆ ತಟ್ಟೆಯಲ್ಲಿ 25 ಸಾವಿರ ರೂಪಾಯಿ ನೀಡಿ ಗೆಲುವಿಗೆ ಶುಭಾ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಕೂಡ ಇದ್ದರು.