ಭಟ್ಕಳ : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆಇಇ ಮೇನ್ಸ್ ಅಂತಿಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಭಟ್ಕಳದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಸಿಸಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ವಿದ್ಯಾರ್ಥಿಗಳಾದ ಸುಶಾಂತ್ ೯೭%(ರ‌್ಯಾಂಕ್ ೧೧೦೦೯), ಸಂಜಿತ್ ೯೫%, ನವ್ಯ ೯೪.೦೯%(ರ‌್ಯಾಂಕ್ ೧೪೮೫೯),ಆದರ್ಶ ೯೩.೫೧%, ಕವನ ೯೧.೮೯%, ವಿಘ್ನೇಶ ಪ್ರಭು ೯೧.೭೯% ಮತ್ತಿತರರು ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಜೆಇಇ ಅಡ್ವಾನ್ಸ್‌ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿರುತ್ತಾರೆ. ಇವರ ಜೊತೆ ನಿತಿನ್, ಶಿವಾನಿ, ಸತ್ಯಂ, ದಿಶಾ ಸೇರಿದಂತೆ ಇನ್ನೂ ೨೫ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಗಳಿಸಿದ್ದಾರೆ. ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ಸಿಬ್ಬಂದಿ ಶುಭಹಾರೈಸಿದ್ದಾರೆ.

ಇದನ್ನೂ ಓದಿ : ಹೆಂಡತಿ ಹೆರಿಗೆಯಾದ ಆಸ್ಪತ್ರೆಗೆ ೧೫ ಸೀಲಿಂಗ್ ಫ್ಯಾನ್ ಉಡುಗೊರೆ