ಕುಮಟಾ: ಇಲ್ಲಿನ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ದಿ. ಡಾ.ಟಿ.ಟಿ.ಹೆಗಡೆಯವರ ಜನ್ಮ ದಿನೋತ್ಸವವನ್ನ ಸಂಘದ ಆಡಳಿತ ಮಂಡಳಿಯವರು ಭಾವಪೂರ್ಣವಾಗಿ ಆಚರಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು ಇಲ್ಲಿ ಒತ್ತಿ.

ಮೂರೂರು ರಸ್ತೆಯಲ್ಲಿರುವ ಸಂಘದ ಹವ್ಯಕ ಸಭಾಮಂಟಪದಲ್ಲಿ ಬೆಳಿಗ್ಗೆ ಪಾರಾಯಣ, ಮಧ್ಯಾಹ್ನ ಗಣಪತಿ ದೇವಸ್ಥಾನದಲ್ಲಿ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ದಿವಂಗತರ ಪುತ್ಥಳಿಗೆ ಸಂಘದ ಅಧ್ಯಕ್ಷ ಡಾ. ಶ್ರೀಕಾಂತ ಹೆಗಡೆ ಮಾಲಾರ್ಪಣೆ ಮಾಡಿದರು. ಸಂಘದ ಪದಾಧಿಕಾರಿಗಳಾದ ಎಂ.ಎನ್.ಹೆಗಡೆ, ಚಂದ್ರಶೇಖರ ಉಪಾಧ್ಯಾಯ, ಸಾವಿತ್ರಿ ಭಟ್ಟ, ವಿಘ್ನೇಶ್ವರ ಭಟ್ಟ ಕಲ್ಲಬ್ಬೆ, ಗಣೇಶ ಭಟ್ಟ ಬಗ್ಗೋಣ ಹಾಗೂ ಇತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದಿ. ಡಾ.ಟಿ.ಟಿ.ಹೆಗಡೆಯವರ ಜೊತೆ ಕಳೆದ ಆತ್ಮೀಯ ಕ್ಷಣಗಳ ಮೆಲುಕು ಹಾಕಿ ಅವರನ್ನು ಸ್ಮರಿಸಿದರು.

ಇದನ್ನೂ ಓದಿ : ಕೌಶಿಕ್ ಶೆಟ್ಟಿ ಸಿ.ಎ. ಪರಿಕ್ಷೆಯಲ್ಲಿ ಉತ್ತೀರ್ಣ