ಭಟ್ಕಳ : ಇಲ್ಲಿನ ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ತನ್ನ ಶಾಲಾ ವಿದ್ಯಾರ್ಥಿ ಸಂಘದ ಚುನಾವಣೆಗೆ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಮೂಲಕ ಕಾಗದ ರಹಿತ ಡಿಜಿಟಲ್ ಚುನಾವಣೆಗೆ ನಾಂದಿ ಹಾಡಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪ್ರತಿ ವರ್ಷ ನಡೆಯುವ ವಿದ್ಯಾರ್ಥಿ ಸಂಘದ ಚುನಾವಣೆಗೆ ಸರಿಸುಮಾರು ೨೫೦೦ ಬ್ಯಾಲೆಟ್ ಪೇಪರ್ ಅಗತ್ಯವನ್ನು ಮನಗಂಡ ಶಿಕ್ಷಣ ಸಂಸ್ಥೆಯು ಕಂಪ್ಯೂಟರ್ ಮೂಲಕ ಡಿಜಿಟಲ್ ಚುನಾವಣೆ ನಡೆಸಿ ಮೆಚ್ಚುಗೆಗೆ ಪಾತ್ರವಾಯಿತು. ಚುನಾವಣೆ ಪಕ್ರಿಯೆಯನ್ನು ವೀಕ್ಷಿಸಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುರೇಶ ನಾಯಕ, ತಂತ್ರಜ್ಞಾನಕ್ಕೆ ಒತ್ತು ನೀಡುವುದರೊಂದಿಗೆ ಪರಿಸರ ಸ್ನೇಹಿ ಚುನಾವಣೆ ನಡೆಸಿದ್ದನ್ನು ಶ್ಲಾಘಿಸಿದರು. ಶಾಲೆಯ ಡಿಜಿಟಲ್ ಚುನಾವಣೆಗೆ ಗುರು ಸುಧೀಂದ್ರ ಕಾಲೇಜ್ ಬಿಸಿಎ ವಿಭಾಗದವರು ಮಾರ್ಗದರ್ಶನ ನೀಡಿದರು.
ಇದನ್ನೂ ಓದಿ : ‘ಬಿಜ್ ಡೊಕ್-೨೦೨೪’ ವಿನೂತನ ಪ್ರೀಮಿಯರ್ ಪ್ರದರ್ಶನ ಯಶಸ್ವಿ