ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಸಮೀಪದ ಶ್ರೀ ಕ್ಷೇತ್ರ ತಾಯಿನಾಡು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಮಹಾಶಿವರಾತ್ರಿ ಹಬ್ಬದ ಉತ್ಸವವು ಮಾ.೮ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಇದನ್ನೂ ಓದಿ : ಮುರುಡೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ ನಿಮಿತ್ತ ಪೂರ್ವಭಾವಿ ಸಭೆ
ಶಿವರಾತ್ರಿ ದಿನ ಭಟ್ಕಳದಿಂದ ಮುರ್ಡೇಶ್ವರಕ್ಕೆ ಪಾದಯಾತ್ರೆ
ಶ್ರೀ ಕ್ಷೇತ್ರ ಮುರ್ಡೇಶ್ವರದಲ್ಲಿ ಮಹಾ ಶಿವರಾತ್ರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ
ಮಾ.೭ರಂದು ಶುಕ್ರವಾರ ಶ್ರೀ ಕ್ಷೇತ್ರ ತಾಯಿನಾಡು ಸನ್ನಿಧಾನದಲ್ಲಿ ಸಂಜೆ ಶ್ರೀ ನಾಗದೇವರಿಗೆ ಆಶ್ಲೇಷಾ ಬಲಿ ನಡೆಯಲಿದೆ. ಮಾ.೮ ರಂದು ಶನಿವಾರ ಬೆಳಿಗ್ಗೆ 8ಕ್ಕೆ ಶ್ರೀ ಗಣಪತಿ ದೇವರಿಗೆ ಗಣಹೋಮ, ಶ್ರೀ ದೇವಿಗೆ ದುರ್ಗಾ ಹೋಮ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಅಲಂಕಾರ ಪೂಜೆ ನಡೆಯಲಿದೆ. ಮಧ್ಯಾಹ್ನ1ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30 ರಿಂದ ಶ್ರೀ ಸಿದ್ಧಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿಯ ತನಕ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಹಾಗೂ ಉಪಹಾರ ವಿತರಣೆ ನಡೆಯಲಿದೆ ಎಂದು ಜಯರಾಮ ಪೂಜಾರಿ ಕುಟುಂಬಸ್ಥರು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೇರಣಾದಾಯಕ ಮಾತು : https://m.facebook.com/story.php?story_fbid=pfbid0uWCidyZwt8m2VXwNki34VFkuVCJ14rpsz2HFGcHDGjfngFBGrLzWx2ihPkKArv2Cl&id=61555144611326&mibextid=Nif5oz