ಭಟ್ಕಳ: ಡಾ. ಸಚಿನ್ ಭಟ್ಟ ಹಾಗೂ ಪ್ರೊ. ಅಲಕಾ ಅನಂತ ದಂಪತಿಗೆ ಕರ್ನಾಟಕ ಸರ್ಕಾರದ ಚೊಚ್ಚಲ ‘ತಳಹಂತದ ನಾವೀನ್ಯತಾ ಪುರಸ್ಕಾರ’ (ಗ್ರಾಸ್‌ರೂಟ್ ಇನ್ನೋವೆಶನ್ ಅವಾರ್ಡ್) ಘೋಷಣೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಸುಸ್ಥಿರ ಅಭಿವೃದ್ಧಿ ಹಾಗೂ ತಳ ಮತ್ತು ಗ್ರಾಮೀಣ ಹಂತದ ಜನರಿಗೆ ನೆರವಾಗುವ ತಂತ್ರಜ್ಞಾನದ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಈ ವರ್ಷದಿಂದ ಗ್ರಾಸ್‌ರೂಟ್ ಇನ್ನೋವೇಶನ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಪುರಸ್ಕಾರಕ್ಕೆ ಪತಿ-ಪತ್ನಿ ಆಯ್ಕೆಯಾಗಿರುವುದು ವಿಶೇಷ.

ಇದನ್ನೂ ಓದಿ : ಸ್ನೇಹಾ ವಿಶೇಷ ಮಕ್ಕಳ ಶಾಲೆಗೆ ಕಾಶೀಮಠ ವ್ಯವಸ್ಥಾಪಕ ಸಮಿತಿ ಭೇಟಿ

ಡಾ. ಸಚಿನ್ ಭಟ್ಟ ತಮ್ಮ ಪತ್ನಿಯೊಡನೆ ಜಿಲ್ಲೆಯ ಕುಮಟಾದಲ್ಲಿ ‘ಅಲರ್’ ಎಂಬ ಸ್ಟಾರ್ಟಪ್‌ ಪ್ರಾರಂಭಿಸಿದ್ದಾರೆ. ಈ ಸ್ಟಾರ್ಟಪ್‌ ಮೂಲಕ ನಡೆದ ಎರಡು ಸಂಶೋಧನೆಗಳಿಗೆ ರಾಜ್ಯ ಸರಕಾರದಿಂದ ಪುರಸ್ಕಾರ ಲಭಿಸಿದೆ. ಶಸ್ತ್ರಚಿಕಿತ್ಸೆಯಲ್ಲಿ ಶುಶ್ರೂಕರಿಗೆ (ನರ್ಸ) ನೆರವಾಗುವ ತಂತ್ರಜ್ಞಾನ ಹಾಗೂ ಕಟ್ಟಡ ನಿರ್ಮಾಣದಲ್ಲಿ ಮಣ್ಣಿನ ಧಾರಣಾ ಸಾಮರ್ಥ್ಯವನ್ನು ಅಳೆಯುವ ಉಪಕರಣವನ್ನು ಕಂಡುಹಿಡಿದದ್ದಕ್ಕಾಗಿ ರಾಜ್ಯ ಸರ್ಕಾರ ದಂಪತಿಗೆ ಆಯ್ಕೆ ಮಾಡಿದೆ.

ಇದನ್ನೂ ಓದಿ : ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿ ತಾಯಿಯೂ ಆತ್ಮಹತ್ಯೆ

ಕೃತಕ ಬುದ್ಧಿಮತ್ತೆಯ ಸಂಶೋಧಕರಾಗಿರುವ ಡಾ. ಸಚಿನ್ ಭಟ್ಟ ತಮ್ಮ ಸಂಶೋಧನೆಗಳಿಗೆ ಈ ಹಿಂದೆ ಇಸ್ರೋ, ರಾಜ್ಯ ಸರ್ಕಾರ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.