ಭಟ್ಕಳ: ಇಲ್ಲಿನ ಶ್ರೀಗುರು ರಂಗಭೂಮಿ, ಜನಪದ ಮತ್ತು ಸಾಂಸ್ಕೃತಿಕ ಕಲಾ ಸಂಘದ ದಶಮಾನೋತ್ಸವ ಅಂಗವಾಗಿ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗ, ಕೋಣಾರ ಇವರ ಸಹಕಾರದೊಂದಿಗೆ ಕಲಾಪೋಷಕ ಪ್ರಶಸ್ತಿ, ಹಿರಿಯ ರಂಗಭೂಮಿ ಕಲಾವಿದರಿಗೆ ಸನ್ಮಾನ ಹಾಗೂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ : ರಾಜಾಂಗಣ ನಾಗಬನ ದೇವರ ಪ್ರಥಮ ವರ್ಧಂತಿ ೨೯ರಂದು
ಫೆ.೨೮ರಂದು ಬುಧವಾರ ಸಂಜೆ 7 ಗಂಟೆಗೆ ಭಟ್ಕಳ ತಾಲೂಕಿನ ಕೋಣಾರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ‘ದೇವರು ಬರೆದ ನಾಟಕ’ ಪ್ರದರ್ಶನ ನಡೆಯಲಿದೆ. ಕೆ.ಆರ್. ನಾಯ್ಕ ಹಾಗೂ ಎಸ್.ಎನ್. ದೇವಡಿಗ ನಾಟಕ ನಿರ್ದೇಶಿಸಿದ್ದಾರೆ ಎಂದು ದಶಮಾನೋತ್ಸವ ಸಮಿತಿ ಸಂಚಾಲಕರಾದ ಜಗದೀಶ ಎಲ್. ನಾಯ್ಕ ಬೆಳ್ಕೆ ಹಾಗೂ ವೆಂಕಟೇಶ ಎಸ್‌. ನಾಯ್ಕ ತಲಗೋಡು ತಿಳಿಸಿದ್ದಾರೆ.

ಇದನ್ನೂ ಓದಿ : ಶ್ರೀ ಕ್ಷೇತ್ರ ಮುರ್ಡೇಶ್ವರದಲ್ಲಿ ಮಹಾ ಶಿವರಾತ್ರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ
ಉಸ್ತುವಾರಿ ಸಚಿವರಾದ ಮಂಕಾಳ ಎಸ್. ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಜಗದೀಶ ಎಲ್. ನಾಯ್ಕ ಬೆಳ್ಳೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೋಣಾರ ಗ್ರಾಮ ಪಂಚಾಯತ ಅಧ್ಯಕ್ಷ ನಾಗಪ್ಪ ಕುಪ್ಪಯ್ಯ ಗೊಂಡ, ಕೋಣಾರಿನ ಸಿದ್ಧಿವಿನಾಯಕ ವಿವಿದೋದ್ದೇಶಗಳ ಸಹಕಾರಿ ಸಂಘ ಹಾಗೂ ಹಾಡುವಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ಮಂಜು ಶೆಟ್ಟಿ, ಕೋಣಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಸಂಕಯ್ಯ ರಾಮಯ್ಯ ಗೊಂಡ, ಕೋಣಾರ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ನಾಗೇಶ ಲಚ್ಚಯ್ಯ ನಾಯ್ಕ, ಶ್ರೀಗುರು ಜಿಲ್ಲಾ ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ ಜೈರಾಮ ಭಟ್, ಉದ್ದಿಮೆದಾರ ಡಿ.ಕೆ. ಮೊಗೇರ, ಕೋಣಾರ ಶ್ರೀ ಸಿದ್ದಿವಿನಾಯಕ ವಿವಿದೋದ್ದೇಶಗಳ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ದುರ್ಗಯ್ಯ ನಾಯ್ಕ, ಹಿರಿಯ ಕಲಾವಿದ ಶ್ರೀಧರ ಅನಂತ ಹೆಗ್ಡೆ ಉಪಸ್ಥಿತರಿರುವರು ಎಂದು ಸಂಘದ ಗೌರವಾಧ್ಯಕ್ಷ ಅಶೋಕ ಮಹಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಡಿಯೋ ನೋಡಿ : ಶ್ರೀ ಹೇಗಲತ್ತಿ ಕ್ಷೇತ್ರದಲ್ಲಿ ಜಾತ್ರೆ ಸಂಪನ್ನ.  https://fb.watch/qtjnkLUBcF/?mibextid=Nif5oz