ಬೆಳಗಾವಿ : ಖಾನಾಪುರ ತಾಲೂಕಿನ ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ ಲಕ್ಷಾಂತರ ರೂ. ನಗದು ಪತ್ತೆಯಾಗಿದ್ದು, ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಣಕುಂಬಿ ಚೆಕ್ ಪೋಸ್ಟಿನಲ್ಲಿ ಇಂದು (ಮಾ.೨೯) ರ ಮುಂಜಾನೆ ೮.೩೦ ಘಂಟೆ ಸಮಯಕ್ಕೆ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಪ್ರಧಾನಿ ಮೋದಿಯೇ ನಮ್ಮ ಗ್ಯಾರೆಂಟಿ : ಎನ್.ಎಸ್.ಹೆಗಡೆ
ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ಗಾಂಧಿನಗರಓಣಿ ನಿವಾಸಿ ಸಂಜಯ ಬಸವರಾಜ ರೆಡ್ಡಿ ಕೆ.ಎ-೨೯ ಎಎಫ್-೧೫೩೨ ಸಂಖ್ಯೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಬಸ್ಸು ಗೋವಾ ರಾಜ್ಯದಿಂದ ಬೆಳಗಾವಿಗೆ ಹೋಗುವ ಸಮಯದಲ್ಲಿ ಕರ್ತವ್ಯನಿರತ ಎಸ್.ಎಸ್.ಟಿ ತಂಡದವರು ಮತ್ತು ಪೋಲಿಸ್ ಸಿಬ್ಬಂದಿ ತಪಾಸಣೆ ಮಾಡಿದಾಗ ದಾಖಲೆಯಿಲ್ಲದ ಲಕ್ಷಾಂತರ ರೂ. ನಗದು ಪತ್ತೆಯಾಗಿದೆ. ಒಟ್ಟು ೭.೯೮ ಲಕ್ಷ ರೂ. ಮೊತ್ತದ ನಗದನ್ನು ಅಧಿಕೃತ ದಾಖಲೆಗಳು ಪರಿಶೀಲನಾ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ನಿಯಮಾನುಸಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ವಿಡಿಯೋ ವರದಿ ಕೂಡ ನೋಡಿ : ಭಟ್ಕಳದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ
ಈ ಹಣವನ್ನು ಖಾನಾಪುರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಎಸ್ಎಸ್ ಟಿ ತಂಡದ ಅಧಿಕಾರಿ ಮಲಗೌಡ ಪಾಟೀಲ ಅವರು ಖಾನಾಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.