ಭಟ್ಕಳ: ಇತ್ತೀಚಿಗೆ ನಿಧನರಾದ ಶಿರಾಲಿಯ ಪ್ರಸಿದ್ಧ ಉದ್ಯಮಿ, ಶಿರಾಲಿ ಜನತಾ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ದೇವಿದಾಸ ಜೆ. ಕಾಮತ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಶಿರಾಲಿ ಜನತಾ ವಿದ್ಯಾಲಯದಲ್ಲಿ ನಡೆಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸ್ಥಳೀಯ ಮುಖಂಡರಾದ ಆರ್.ಕೆ.ನಾಯ್ಕ, ಶಿವಾನಂದ ಕಾಮತ, ಅಣ್ಣಪ್ಪ ಮೊಗೇರ, ಎಮ್.ಡಿ.ಫಕ್ಕಿ, ಪ್ರಾಚಾರ್ಯ ಎ.ಬಿ.ರಾಮರಥ, ಡಿ.ಜೆ.ಕಾಮತ ಅವರ ಸಹೋದರ ವಿಜಯ ಕಾಮತ, ವಿಠ್ಠಲದಾಸ ಕಾಮತ, ಜನತಾ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಸಮಿತಿ ಪರಿವಾರ ಸಂಘಟನೆಗಳ ಅಧ್ಯಕ್ಷ ಶಂಕರ ನಾಯ್ಕ, ಉಪಾಧ್ಯಕ್ಷ ಪ್ರಭಾಕರ ನಾಯ್ಕ, ಪ್ರಮುಖರಾದ ವಿಷ್ಣು ದೇವಡಿಗ, ರಾಮರಾಯ ಕಾಮತ ಮಾತನಾಡಿದರು. ಮೃತ ದೇವಿದಾಸ ಜೆ. ಕಾಮತ ಅವರ ಸಾಧನೆ, ಶಿಕ್ಷಣದ ಬಗ್ಗೆ ಅವರಿಗಿದ್ದ ಪ್ರೀತಿ, ನಿಷ್ಕಲ್ಮಷ ಸಮಾಜ ಸೇವೆಯನ್ನು ಕೊಂಡಾಡಿದರು.
ಇದನ್ನೂ ಓದಿ : ಜೂನ್ ೧೯ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಶಾಲಾ ಮುಖ್ಯೋಪಾಧ್ಯಾಯಿನಿ ಆಶಾ ಭಟ್ ಸ್ವಾಗತಿಸಿದರು. ಅರುಣ ಗೌಡ ವಂದಿಸಿದರು. ಶಿಕ್ಷಕಿ ಮಿತಾ ಉಪಸ್ಥಿತರಿದ್ದರು. ಶಿರಾಲಿ ಜನತಾ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಪರಿವಾರ ಸಂಘಟನೆಗಳ ಕಾರ್ಯದರ್ಶಿ ನಟರಾಜ ದೇವಡಿಗ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ : ೫೦ಕ್ಕೂ ಅಧಿಕ ಅಡಿಕೆ ಸಸಿಗಳು ಹಂದಿ ಕಾಟದಿಂದ ಹಾನಿ