ಕುಮಟಾ: ನೆಲ್ಲಿಕೇರಿ ಸರಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಧ್ಯಾನ ರಾಮಚಂದ್ರ ಭಟ್ಟ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಪಡೆದಿದ್ದಾನೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸರ್ಕಾರಿ ಕಾಲೇಜಿನಲ್ಲಿ ಓದಿಯೂ ಈ ಹಿಂದೆ ಮೂರನೇ ರ‍್ಯಾಂಕ್ ಬರುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದ. ಆದರೆ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಬರುತ್ತದೆ ಎಂದು ಅಚಲ ವಿಶ್ವಾಸ ಹೊಂದಿದ್ದ ಈತನಿಗೆ ೯೯ ಅಂಕ ಬಂದಿತ್ತು. ಹೀಗಾಗಿ ಮರುಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸಿದ್ದ. ಈಗ ಮರುಮೌಲ್ಯಮಾಪನದ ಅಂಕ ಪ್ರಕಟವಾಗಿದೆ. ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಬಂದಿದೆ. ತನ್ಮೂಲಕ ಉತ್ತರಕನ್ನಡ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಮಟ್ಟದಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿದ್ದಾನೆ.
ಈತ ಇಂಗ್ಲೀಷ್ ನಲ್ಲಿ ೯೪, ಸಂಸ್ಕೃತದಲ್ಲಿ ೧೦೦, ಅರ್ಥಶಾಸ್ತ್ರದಲ್ಲಿ ೧೦೦, ವ್ಯವಹಾರ ಅಧ್ಯಯನದಲ್ಲಿ ೧೦೦, ಲೆಕ್ಕಶಾಸ್ತ್ರದಲ್ಲಿ ೧೦೦, ಗಣಕ ವಿಜ್ಞಾನದಲ್ಲಿ ೧೦೦ ಅಂಕಗಳೊಂದಿಗೆ ಒಟ್ಟೂ ೬೦೦ಕ್ಕೆ ೫೯೬ ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾನೆ.
ಮರುಮೌಲ್ಯಮಾಪನದಿಂದ ಹೆಚ್ಚಿನ ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಬಂದಿರುವುದು ಇನ್ನಷ್ಟು ಸಂತಸ ತಂದಿದೆ ಎಂದು ಧ್ಯಾನ ಭಟ್ಟ ಪ್ರತಿಕ್ರಿಯೆ ನೀಡಿದ್ದಾನೆ.
ಇದನ್ನೂ ಓದಿ : ಹೊನ್ನಾವರದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ
ಇದನ್ನೂ ಓದಿ : ಶ್ರಾವ್ಯ ಭಟ್ಟ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ೫ನೇ ರ‍್ಯಾಂಕ್