ಭಟ್ಕಳ:  ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಶ್ರೀ ನಾಗಮಾಸ್ತಿ ದೇವರ  ಪುನ‌ರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಮೊದಲ ದಿನ ದೇವರ ನೂತನ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ವಿಡಿಯೋ ನೋಡಿ :   https://fb.watch/qlqH2lVWqz/?mibextid=Nif5oz
ಇದಕ್ಕೂ ಪೂರ್ವ ದೇವರ ವಿಗ್ರಹದೊಂದಿಗೆ ನಾಗಮಾಸ್ತಿ ದೇವಸ್ಥಾನದಿಂದ  ಹೊರಟ ಮೆರವಣಿಗೆ ರೈಲ್ವೆ ನಿಲ್ದಾಣದ ಮೂಲಕ ಮುಟ್ಟಳ್ಳಿ, ಮೂಢಭಟ್ಕಳ, ವಿವಿ ರಸ್ತೆ ಮೂಲಕ ಮಣ್ಕುಳಿಯಿಂದ ಪುನಃ ಸ್ವಕ್ಷೇತ್ರಕ್ಕೆ ತಲುಪಿತು.

ಇದನ್ನೂ ಓದಿ : ಫೆ.21-22: ಮಣಕುಳಿ ನಾಗಮಾಸ್ತಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ ಕಾರ್ಯಕ್ರಮ
ಮೆರವಣಿಗೆಯಲ್ಲಿ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ, ಚಂಡೆ, ಹುಲಿ ವೇಷಧಾರಿಗಳು, ಗೊಂಬೆಗಳ ಕುಣಿತ ಹಾಗೂ ವಿಶೇಷವಾಗಿ ಮೆರವಣಿಗೆಯುದಕ್ಕೂ ಮಹಿಳೆಯರು ಹಾಗೂ ಮಕ್ಕಳಿಂದ ಭಜನಾ ಕುಣಿತ ಎಲ್ಲರ ಆಕರ್ಷಣೆಯಾಗಿತ್ತು.


ಈ ಸಂದರ್ಭದಲ್ಲಿ ಮುಟ್ಟಳ್ಳಿ , ಮಣ್ಕುಳಿ , ತಲಾಂದ ಹಾಗೂ ಅಕ್ಕ ಪಕ್ಕದ ಊರಿನ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.