ಬೆಂಗಳೂರು : ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ. ಈ ಪಟ್ಟಿ ಆಯಾ ಇಲಾಖೆಗಳಿಗೆ ರವಾನೆಯಾಗಿದೆ. ಗುರುವಾರ ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ನೇಮಕ ಆದೇಶ ರವಾನೆಯಾಗಿದೆ.

ಇದನ್ನೂ ಓದಿ :ದಿನ ನಿಗದಿ ಮುನ್ನವೇ ಚುನಾವಣೆಗೆ ಸಜ್ಜಾದ ಜಿಲ್ಲಾಡಳಿತ

ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಸರೋವರ ಶ್ರೀನಿವಾಸ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಅಲ್ತಾಫ್, ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಶಾಂತನಾಯಕ್, ಮಹಿಳಾ ಆಯೋಗ ಅಧ್ಯಕ್ಷರಾಗಿ ನಾಗಲಕ್ಷ್ಮಿ ಚೌಧರಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಆರ್.ಎಂ. ಮಂಜುನಾಥಗೌಡ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಸುಂದರೇಶ್, ಸಾಂಬಾರು ಮಂಡಳಿ ಅಧ್ಯಕ್ಷರಾಗಿ ಪಲ್ಲವಿ ಅವರನ್ನು ನೇಮಿಸಲಾಗಿದೆ. ವಿನೋದ ಅಸೂಟಿ, ಆಂಜನೇಯಲು, ಮರಿಗೌಡ, ಮುಂಡರಗಿ ನಾಗರಾಜ್, ಡಾ.ಹೆಚ್. ಕೃಷ್ಣ, ಎನ್. ರಾಮಪ್ಪ, ಆಯೂಬ್ ಖಾನ್, ಸುಧೀಂದ್ರ, ಜಿ.ಎಸ್. ಮಂಜುನಾಥ್ ಸೇರಿದಂತೆ 44 ಮಂದಿಗೆ ಅವಕಾಶ ನೀಡಲಾಗಿದೆ. ಗಡಿ ಪ್ರದೇಶಗಳ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಸೋಮಣ್ಣ ಬೇವಿನಮರದ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ವಿಡಿಯೋ ನೋಡಿ : ಸರ್ಕಾರಿ ನೌಕರರ ವಾಲಿಬಾಲ್ ಪಂದ್ಯಾವಳಿ  https://fb.watch/qvOK57cyxD/?mibextid=Nif5oz

ತಿಂಗಳ ಹಿಂದಷ್ಟೇ ಶಾಸಕರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದ ಕರ್ನಾಟಕ ಕಾಂಗ್ರೆಸ್‌ ಇದೀಗ ಕಾರ್ಯಕರ್ತರಿಗೂ ಶುಭ ಸುದ್ದಿ ನೀಡಿದೆ. ಇದರೊಂದಿಗೆ ಬಹಳಷ್ಟು ಸಮಯದಿಂದ ನನೆಗುದಿಗೆ ಬಿದ್ದಿದ್ದ ನೇಮಕ ಪ್ರಹಸನಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ. ಶಾಸಕರಿಗೆ ಹಾಗೂ ಕಾರ್ಯಕರ್ತರನ್ನು ನೇಮಕ ಮಾಡುವ ವಿಚಾರವಾಗಿ ಬಹಳಷ್ಟು ಸಮಸ್ಯೆಗಳನ್ನು ಕಾಂಗ್ರೆಸ್ ಸರ್ಕಾರ ಎದುರಿಸಿತ್ತು.

ಎನ್.ಎ.ಹ್ಯಾರಿಸ್, ಕೆಎಂ ಶಿವಲಿಂಗೇಗೌಡ, ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಜನವರಿ 26ರಂದು ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಒಂದು ಹಂತದಲ್ಲಿ ಈ ನೇಮಕ ವಿಚಾರವಾಗಿ ಹೈಕಮಾಂಡ್ ಜತೆಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾ‌ರ್ ಸಂಘರ್ಷಕ್ಕೆ ಇಳಿದಿದ್ದರು. ಅಂತಿಮವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ನೇಮಕ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು. ಇದೀಗ ಕಾರ್ಯಕರ್ತರಿಗೂ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸುವ ಯತ್ನ ಮಾಡಿದೆ.