ಭಟ್ಕಳ : ನೀರು ತುಂಬಿದ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸ್ಮಶಾನ ಸಮೀಪ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಕಾಯ್ಕಿಣಿ ತೆರ್ನಮಕ್ಕಿಯ ಕಟಗೇರಿ ನಿವಾಸಿ ಧಮೇಂದ್ರ ವಾಮನ ಶೆಟ್ಟಿ (೪೮) ಮೃತ ದುರ್ದೈವಿ. ಇವರು ಬುಧವಾರ ಸಂಜೆ ೫ ಗಂಟೆಗೆ ಮನೆಯಿಂದ ಹೊರ ಹೋದವರು ಮರಳಿ ಮನೆಗೆ ಬಂದಿರಲಿಲ್ಲ ಬಳಿಕ ಇಂದು ಶನಿವಾರ  ಮಧ್ಯಾಹ್ನ 2 ಘಂಟೆ ಸಮಯಕ್ಕೆ ಮೃತದೇಹ ಪತ್ತೆಯಾಗಿದೆ. ಪರಿಚಯಸ್ಥರಾದ ಭಾಸ್ಕರ ನಾಯ್ಕ ಎನ್ನುವವರು ಮೃತನ ಪತ್ನಿಗೆ ಪೋನ್ ಮಾಡಿ ತೆರ್ನಮಕ್ಕಿಯ ಸ್ಮಶಾನದ ಪಕ್ಕದಲ್ಲಿರುವ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದು ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ಮೃತನ ಪತ್ನಿ, ಮಕ್ಕಳು ಹೋಗಿ ನೋಡಿ ಗುರುತು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ : ರೈಲ್ವೆ ಅಭಿವೃದ್ಧಿ ಕುರಿತಾಗಿ ಶಾಸಕ ದಿನಕರ ಶೆಟ್ಟಿ ಚರ್ಚೆ

ಮೃತ ವ್ಯಕ್ತಿ ನೀರು ತುಂಬಿದ ಹೊಂಡದಲ್ಲಿ ಕೈ-ಕಾಲು, ಮುಖ ತೊಳೆಯಲು ಅಥವಾ ಸ್ನಾನ ಮಾಡಲು ಹೋಗಿ ಕಾಲು ಜಾರಿ ಹೊಂಡದಲ್ಲಿ ಬಿದ್ದು, ನೀರಿನಲ್ಲಿ ಮುಳುಗಿ ಮೃತ ಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಗಂಡನ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಎಂದು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಮೃತನ ಪತ್ನಿ ಪ್ರಕರಣ ದಾಖಲಿಸಿದ್ದಾರೆ.