ಭಟ್ಕಳ: ಭಟ್ಕಳ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಕಡವಿನಕಟ್ಟೆ ಡ್ಯಾಂನಿಂದ ತಾಲೂಕಿನ ನಗರ ಭಾಗಕ್ಕೆ ಸರಬರಾಜಾಗುವ ಸುಮಾರು ಆರು ಇಂಚಿನ ನೀರಿನ ಪೈಪ್ ಒಡೆದು ನೀರು ಪೋಲು ಆಗುತ್ತಿದೆ.
ಇದನ್ನೂ ಓದಿ : ಅಭಿವೃದ್ದಿಯ ದೃಷ್ಟಿಯಲ್ಲಿ ಈ ಬಾರಿಯ ಚುನಾವಣೆ : ಐವನ್ ಡಿಸೋಜಾ
ಉರಿ ಬಿಸಿಲಿನಿಂದಾಗಿ ತಾಲೂಕಿನ ಜನತೆ ಹೈರಾಣಾಗಿದ್ದಾರೆ. ಬಿಸಿಲಿನ ದಾಹಕ್ಕೆ ಕಂಗೆಟ್ಟ ಜನರಿಗೆ ಈಗ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಜನರಿಗೆ ಜೀವಜಲವಾಗಬೇಕಾಗಿದ್ದ ಕಡವಿನಕಟ್ಟೆ ಡ್ಯಾಂ ಜೀವವಿಲ್ಲದ ಹಾಗೇ ಬರಿದಾಗುತ್ತಿದೆ.
ಹೀಗಿರುವಾಗ ಪುರಸಭೆಯಿಂದ ಸರಬರಾಜು ಆಗುವ ನೀರಿನ ಪೈಪ್ ಒಡೆದು ನೀರು ಪೋಲು ಆಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನೀರು ಪೂರೈಕೆ ಆಗುವ ಪೈಪ್ ಲೈನ್ ಪಟ್ಟಣದ ಸಂತೆ ಮಾರುಕಟ್ಟೆ ಸಮೀಪ ಇರುವ ನೀರಿನ ಟ್ಯಾಂಕ್ ಗೆ ಸಂಪರ್ಕಿಸುತ್ತದೆ. ಕೂಡಲೇ ಪುರಸಭೆ ಎಚ್ಚೆತ್ತುಕೊಂಡು ಈ ಸಮಸ್ಯೆ ಸರಿಪಡಿಸಬೇಕಾಗಿದೆ.
ಓದುಗರಿಂದ ಮಾಹಿತಿ
ಮಣ್ಕುಳಿ ಆಟೋ ಚಾಲಕ ಪಾಂಡು ನಾಯ್ಕ ಎನ್ನುವವರಿಗೆ ಪೈಪ್ ಒಡೆದಿರುವ ಬಗ್ಗೆ ಯಾರೋ ಗಮನಕ್ಕೆ ತಂದಿದ್ದರು. ಅದನ್ನು ಗಮನಿಸಲು ಶುಕ್ರವಾರ ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಹೋಗಿ ನೋಡಿದರೆ ನೀರು ಪೋಲಾಗುತ್ತಿರುವದು ಗಮನಕ್ಕೆ ಬಂದಿದೆ. ಅವರು ಇದರ ವಿಡಿಯೋ ಚಿತ್ರೀಕರಣ ಮಾಡಿ ಭಟ್ಕಳಡೈರಿ ಜೊತೆ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ : ಪೈಪ್ ಲೈನಿಂದ ಕುಡಿಯುವ ನೀರು ಪೋಲು