ಭಟ್ಕಳ: ಬೆಳಕೆಯ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ವ್ಯಾಪ್ತಿಗೆ ಒಳಪಡುವ ಬೆಳಕೆ ನ್ಯಾಯಬೆಲೆ ಅಂಗಡಿಯ ನೂತನ ಶಾಖೆಯನ್ನು ಸಂಘದ ಕಟ್ಟಡದಲ್ಲಿ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಾದೇವ ನಾಯ್ಕ ಉದ್ಘಾಟಿಸಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ವೇಳೆ ಮಾತನಾಡಿದ ಅವರು, ಈ ಭಾಗದ ಸಾರ್ವಜನಿಕರ ಬಹು ವರ್ಷದ ಬೇಡಿಕೆ ಇದಾಗಿತ್ತು. ಇದರಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸದ್ಯ ಗೊರಟೆ ಗಣೇಶ ನಾಯ್ಕ ಮಾಲೀಕತ್ವದಲ್ಲಿ ನೂತನ ನ್ಯಾಯಬೆಲೆ ಅಂಗಡಿಯ ತೆರೆಯಲಾಗಿದೆ. ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ಶ್ರದ್ಧಾಂಜಲಿ ಸಭೆ ಜೂನ್ ೧೬ರಂದು
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪಾಂಡು ನಾಯ್ಕ, ನಿರ್ದೇಶಕರಾದ ಲಕ್ಷ್ಮೀನಾರಾಯಣ ನಾಯ್ಕ, ಲೋಕೇಶ ನಾಯ್ಕ, ನಾಗೇಶ ನಾಯ್ಕ, ದಾಮೋದರ ನಾಯ್ಕ, ಮಂಜು ಮೊಗೇರ, ರವಿರಾಜ ಜೈನ್, ಭಾಸ್ಕರ ಗೊಂಡ, ಲಲಿತಾ ನಾಯ್ಕ, ಭಾರತಿ ನಾಯ್ಕ, ಶಾರದಾ ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.