ಭಟ್ಕಳ: ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಎರಡು ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಗಣೇಶ ನಗರ ಪುರವರ್ಗ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಆರೋಪದ ಮೇಲೆ ವಾಹನ ತಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ರಾಮ ನಾಯ್ಕ

ಭಟ್ಕಳ ತಾಲೂಕಿನ ಹಡೀಲ್ ಸಬ್ಬತ್ತಿ ಜೋಳದಮೂಲೆ ನಿವಾಸಿ ರಾಮ ಭಡ್ಕಾ ನಾಯ್ಕ ಹಾಗೂ ಬೆಳಕೆ ಕಾನಮದ್ಲು ನಿವಾಸಿ ರಾಮಚಂದ್ರ ಸುಬ್ಬ ನಾಯ್ಕ ಬಂಧಿತ

ರಾಮಚಂದ್ರ ನಾಯ್ಕ

ಆರೋಪಿಗಳಾಗಿದ್ದಾರೆ. ಇವರು ವಧೆ ಮಾಡುವ ಉದ್ದೇಶದಿಂದ ಶನಿವಾರ ಬೆಳಗಿನ ಜಾವ ೪-೩೦ಕ್ಕೆ ಬೈಂದೂರಿನಿಂದ ಭಟ್ಕಳ ಕಡೆಗೆ ಕೋಣಗಳನ್ನು ಸಾಗಾಟ ಮಾಡುತ್ತಿದ್ದರು. ೫೦ ಸಾವಿರ ರೂ. ಮೌಲ್ಯದ ೨ ಕೊಣಗಳನ್ನು ಎಲ್ಲಿಂದಲೋ ಕಳುವು ಮಾಡಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಸಚಿನ್ ಮಹಾಲೆ ನಿಧನಕ್ಕೆ ಗಣ್ಯರ ಕಂಬನಿ

ಯಾವುದೇ ಪಾಸ್ ಪರವಾನಿಗೆ ಇಲ್ಲದೇ ಮಹೀಂದ್ರಾ ಬೊಲೆರೋ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಹಗ್ಗದಿಂದ ಕಟ್ಟಿ ವಾಹನದಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಗಣೇಶನಗರ ಪುರವರ್ಗ ಚೆಕ್ ಪೊಸ್ಟ್ ನಲ್ಲಿ ನಗರ ಠಾಣೆಯ ಪಿ.ಎಸ್.ಐ ಶಿವಾನಂದ ನಾವದಗಿ ವಾಹನ ಸಮೇತ ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನ್ಯಾಯಬೆಲೆ ಅಂಗಡಿಯ ನೂತನ ಶಾಖೆ ಉದ್ಘಾಟನೆ