ಭಟ್ಕಳ : ಪಟ್ಟಣದ ಮಾರುತಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಏ.೩೦ರಂದು ಪ್ರತಿಷ್ಠಾ ವರ್ಧಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ : ಶಿರಸಿಗೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಶ್ರೀ ಮುಖ್ಯಪ್ರಾಣದೇವರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೃತ್ತಿಕಾ ವೃಂದಾವನದ ೧೯ನೇ ಪ್ರತಿಷ್ಠಾ ವರ್ಧಂತ್ಯೋತ್ಸವ ನೆರವೇರಲಿದೆ. ಅಂದು ಬೆಳಿಗ್ಗೆ ೮ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ 9.30ಕ್ಕೆ ಮೃತ್ತಿಕಾ ವೃಂದಾವನಕ್ಕೆ ವಿಶೇಷ ಪಂಚಾಮೃತಾಭಿಷೇಕ, ಮೂಲರಾಮ ದೇವರ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನೆರವೇರುವುದು. ಮಹಾ ಅನ್ನಸಂತರ್ಪಣೆ ಮಧ್ಯಾಹ್ನ ೧ರಿಂದ 3ರವರೆಗೆ ಜರುಗುವುದು. ಸಾಯಂಕಾಲ ಗಂಟೆ ೬ರಿಂದ ಸಾಮೂಹಿಕ ಭಜನೆ ಆಯೋಜಿಸಲಾಗಿದೆ. ರಾತ್ರಿ ಗಂಟೆ ೮ಕ್ಕೆ ರಥೋತ್ಸವ, ಅಷ್ಠಾವಧಾನ ಸಹಿತ ರಜತ ತೊಟ್ಟಿಲು ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು ಇಲ್ಲಿ ಒತ್ತಿ.