ಭಟ್ಕಳ : ಹೈದರಾಬಾದನಿಂದ ಭಟ್ಕಳಕ್ಕೆ ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದ ಭಟ್ಕಳ ಮೂಲದ ಪ್ರಯಾಣಿಕನ ಮೇಲೆ ಐದಾರು ಜನರಿದ್ದ ತಂಡವೊಂದು ಹಲ್ಲೆ ಮಾಡಿರುವ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳ ಹನೀಫಾಬಾದ್ ೧ನೇ ಕ್ರಾಸ್ ನಿವಾಸಿ ಮುಜೀದ್ ಅಬ್ದುಲ್ ಹಮೀದ್ ಎನ್ನುವವರು ಜುಲೈ ೧ ರಂದು ಹೈದರಾಬಾದನಿಂದ ಭಟ್ಕಳಕ್ಕೆ ಸ್ಲೀಪರ್ ಕೋಚ್ ಬಸ್ನಲ್ಲಿ ಟಿಕೆಟ್ ಬುಕ್ ಮಾಡಿ ಹೈದರಾಬಾದನಿಂದ ಹೊರಟಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಡ್ರೈವರ್ ಪಕ್ಕದ ಸೀಟಿನಲ್ಲಿ ಬಂದು ಕುಳಿತಿದ್ದಕ್ಕೆ ಚಾಲಕ ಹಾಗೂ ಕಂಡಕ್ಟರ್ ನಿನ್ನನ್ನು ಇಲ್ಲಿಯೇ ಬಸ್ನಿಂದ ಇಳಿಸಿ ಹೋಗುತ್ತೇವೆ ಅಂತ ಹೆದರಿಸಿದ್ದಾರೆ. ಬಸ್ ಕೊಪ್ಪಳ ಜಿಲ್ಲೆಯ ಗಂಗಾವತಿ ಟೋಲಗೇಟ್ ತಲುಪುತ್ತಿದ್ದಂತೆ ಬಸ್ಸಿನಿಂದ ಇಳಿದು ಗದ್ದೆಯಲ್ಲಿ ಓಡಿ ಹೋಗಿ ಒಂದು ಮನೆಯ ಹತ್ತಿರ ನಿಂತುಕೊಂಡಾಗ ಪ್ರಯಾಣಿಕನ ಮೇಲೆ ಐದಾರು ಜನರು ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಡ್ಡಗಟ್ಟಿ, ಅವಾಚ್ಯ ಶಬ್ದದಿಂದ ಬೈದು ನೀನು ಇಷ್ಟು ಹೊತ್ತಿನಲ್ಲಿ ಇಲ್ಲಿ ಯಾಕೆ ನಿಂತಿದ್ದಿಯಾ? ಇಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಅಂತಾ ಹೇಳಿ ಎಲ್ಲರೂ ಸೇರಿಕೊಂಡು ಕೈಯಿಂದ ಕಾಲಿನಿಂದ ಹೊಡೆದಿದ್ದಾರೆ. ಒದ್ದು, ದೂಡಿ ಹಾಕಿ ತುಳಿದಾಡಿ ನಿನ್ನನ್ನು ಇಲ್ಲಿಯೇ ಸಾಯಿಸಿ ಹಾಕುತ್ತೇವೆ ಅಂತಾ ಬೆದರಿಸಿದ್ದಾರೆ. ಅದರಲ್ಲಿದ್ದ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿದ್ದ ಬೆಲ್ಟ್ ನಿಂದ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ಹಾಕಿ ಒತ್ತಿದ್ದಾನೆ. ಮತ್ತೊಬ್ಬ ಸ್ಟೀಲ್ ರಾಡಿನಿಂದ ಮೈ ಕೈಗೆ ಹೊಡೆದಿದ್ದಾನೆ. ಪುನಃ ಅದೇ ಬೆಲ್ಟ್ಬಿನಿಂದ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಮುಜೀದ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಭಟ್ಕಳದ ವಡೇರ ಮಠದಲ್ಲಿ ೫೫೦ ಕೋಟಿ ಶ್ರೀರಾಮ ನಾಮ ಜಪ ಅಭಿಯಾನ
ಬಸ್ ಅಡ್ಡಗಟ್ಟಿದ ಕುಟುಂಬಸ್ಥರು :
ಹಲ್ಲೆಗೊಳಗಾದ ವ್ಯಕ್ತಿಯ ಸಂಬಂಧಿಕರು ಇದರಿಂದ ಆಕ್ರೋಶಗೊಂಡು ಪುನಃ ಮಂಗಳವಾರ ಸಂಜೆ ಮಂಗಳೂರಿಂದ ಹೈದರಾಬಾದಿಗೆ ತೆರಳುವ ಅದೇ ಖಾಸಗಿ ಬಸ್ ನ್ನು ಅಡ್ಡಗಟ್ಟಿದ್ದಾರೆ. ನಗರದ ಟಿ.ಎಫ್.ಸಿ ಹೋಟೆಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ಪ್ರತಿಭಟನೆಗೆ ಯತ್ನಿಸಿದ್ದರು. ಆದರೆ ಪೊಲೀಸರು ಬಸ್ ತಡೆಯಲು ಅವಕಾಶ ನೀಡದಿರುವ ಹಿನ್ನೆಲೆ ಕೆಲ ಕಾಲ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.