ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ ಕ್ಷೇತ್ರಪಾಲಕ ಶ್ರೀ ಕಾಲಭೈರವ ದೇವರ ಅಷ್ಟಬಂಧ ಪ್ರತಿಷ್ಠೆಯ 49ನೇ ವರ್ಧಂತಿ ಉತ್ಸವ ಫೆ.19ರಂದು ಜರುಗಲಿದೆ.

ಇದನ್ನೂ ಓದಿ:  ಕಿತ್ರೆ ದೇವಿಮನೆಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಆಗಮನ – ಭೋಜನಾಲಯ, ಸಭಾಭವನ ಲೋಕಾರ್ಪಣೆ

ಅಂದು ಶ್ರೀ ಕ್ಷೇತ್ರ ಗೋಕರ್ಣದ ಕೋಟಿತೀರ್ಥದ ನೈಋತ್ಯ ದಿಕ್ಕಿನಲ್ಲಿರುವ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಕಾರವಾರದ ನಾಪಿತ ಸಮಾಜ ಶಿಕ್ಷಣ ಸಂಘದ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ, 7.30ಕ್ಕೆ ಶ್ರೀ ಗಣೇಶ ಪೂಜೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಿಗ್ಗೆ 10ಕ್ಕೆ ಹವನ, ಪೂರ್ಣಾಹುತಿ, 11ಕ್ಕೆ ಕಾರವಾರದ ನಾಪಿತ ಮಹಿಳಾ ಮಂಡಳದಿಂದ ಅರಿಶಿಣ ಕುಂಕುಮ, ಭಜನೆ, ಲಲಿತ ಸಹಸ್ರನಾಮ ಮತ್ತು ಭಗವದ್ಗೀತೆ ಪಠಣ ನೆರವೇರಲಿದೆ.

ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ. 1 ಗಂಟೆಯಿಂದ ಫಲಾನುಭವಿಗಳ ಸವಾಲು ಮತ್ತು ಕಳೆದ ಸಾಲಿನಲ್ಲಿ 7ನೇ ಇಯತ್ತೆ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಅನ್ನಸಂತರ್ಪಣೆ ಜರುಗಲಿದ್ದು, ಸಂಜೆ 5 ಗಂಟೆಗೆ ಶ್ರೀ ಕಾಲಭೈರವ ದೇವ ಸೇವಾ ನಾಪಿಕ ಸಂಘದ ಮಹಾಸಭೆ ನಡೆಯಲಿದೆ.

ಸಂಜೆ 6 ಗಂಟೆಗೆ ಶ್ರೀ ದೇವರ ಪಲ್ಲಕ್ಕಿ ಉತ್ಸವ, ರಾತ್ರಿ 8.30ಕ್ಕೆ ಭಜನೆ, ಅಷ್ಟಾವಧಾನ ಸೇವೆ, ರಾತ್ರಿ 9ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲೊದೆ. ರಾತ್ರಿ 9.30ಕ್ಕೆ ಲಘು ಉಪಹಾರದೊಂದಿದೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಇದನ್ನೂ ಓದಿ :  ಖಾಸಗಿ ಬಸ್ ಮುರುಡೇಶ್ವರಕ್ಕೆ ವಿಸ್ತರಣೆಗೆ ಆಟೋ ಚಾಲಕ-ಮಾಲಕರ ವಿರೋಧ