ಬೆಂಗಳೂರು: 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠವು ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶುಕ್ರವಾರ ಅನುಮತಿ ನೀಡಿದೆ. ಅಂತೆಯೇ ಮಾರ್ಚ್ ೨೫ರಿಂದ (ಸೋಮವಾರ) ಪರೀಕ್ಷೆ ಮುಂದುವರಿಸಲು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿದೆ.
ಇದನ್ನೂ ಓದಿ : ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಚಿವ ಮಂಕಾಳ ವೈದ್ಯ ಕರೆ
ಮಾರ್ಚ್ ೨೫ರಿಂದ ಬೋರ್ಡ್ ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ ೨೮ಕ್ಕೆ ಕೊನೆಯ ಪರೀಕ್ಷೆ ಇರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಆದೇಶ ತಿಳಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ ೨.೩೦ಕ್ಕೆ ಪರೀಕ್ಷೆ ನಡೆಯಲಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ೧೦ ಗಂಟೆಗೆ ಪರೀಕ್ಷೆ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ವಿಡಿಯೋ ನೋಡಿ : ಷೋಡಶ ಪವಿತ್ರ ನಾಗಮಂಡಲೋತ್ಸವ https://fb.watch/q_7EHL6084/?mibextid=Nif5oz
ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ ಪರೀಕ್ಷೆ ಮುಗಿದಿವೆ. ೮ ಹಾಗೂ ೯ನೇ ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ.
೫ನೇ ತರಗತಿ ವೇಳಾಪಟ್ಟಿ
ಮಾ.೨೫- ಪರಿಸರ ಅಧ್ಯಯನ
ಮಾ.೨೬- ಗಣಿತ
೮ನೇ ತರಗತಿ ವೇಳಾಪಟ್ಟಿ
ಮಾ.೨೫- ತೃತೀಯ ಭಾಷೆ
ಮಾ.೨೬- ಗಣಿತ
ಮಾ.೨೭- ವಿಜ್ಞಾನ
ಮಾ.೨೮- ಸಮಾಜ ವಿಜ್ಞಾನ
೯ನೇ ತರಗತಿ ವೇಳಾಪಟ್ಟಿ
ಮಾ.೨೫- ತೃತೀಯ ಭಾಷೆ
ಮಾ.೨೬- ಗಣಿತ
ಮಾ.೨೭- ವಿಜ್ಞಾನ
ಮಾ.೨೮- ಸಮಾಜ ವಿಜ್ಞಾನ
ಇದನ್ನೂ ಓದಿ : ಎಸ್ಎಸ್ಎಲ್ಸಿ ಪರೀಕ್ಷೆ ; ನಿಷೇದಾಜ್ಞೆ, ಬಸ್ ಪ್ರಯಾಣ ಉಚಿತ