ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಗುರುವಾರ (ಜು.೧೧) ಭಟ್ಕಳಕ್ಕೆ ಭೇಟಿ ನೀಡಿದರು. ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ವಿಡಿಯೋ ನೋಡಿಫೇಸ್‌ಬುಕ್‌ ರೀಲ್ / ಇನ್ಸ್ಟಾಗ್ರಾಂನಲ್ಲಿ ರೀಲ್

ಠಾಣೆಗೆ ಆಗಮಿಸಿದ ಪೊಲೀಸ್‌ ವರಿಷ್ಠಾಧಿಕಾರಿ ಎಂ. ನಾರಾಯಣ ಅವರಿಗೆ ಭಟ್ಕಳ ನಗರ ಠಾಣೆ ಪೊಲೀಸರು ಗೌರವ ವಂದನೆ ಸಲ್ಲಿಸಿ ಬರಮಾಡಿಕೊಂಡರು. ಬಳಿಕ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವರಿಷ್ಠಾಧಿಕಾರಿಗಳು, ಠಾಣೆಯ ಆಗುಹೋಗುಗಳ ಬಗ್ಗೆ ವಿಚಾರಿಸಿದರು. ಸಿಬ್ಬಂದಿ ಸಂಖ್ಯೆ, ಪ್ರಕರಣಗಳ ಸಂಖ್ಯೆ, ಭಟ್ಕಳದಂತ ಸೂಕ್ಷ್ಮ ಸ್ಥಳದಲ್ಲಿ ಪೊಲೀಸ್ ಕಾರ್ಯಾಚರಣೆ ಹೇಗಿರಬೇಕು ಎನ್ನುವುದರ ಬಗ್ಗೆ ವಿವರಿಸಿದರು.

ಇದನ್ನೂ ಓದಿ : ಚಿತ್ರಾಪುರ ಮಠದ ಅರ್ಚಕ ರಾಮೇಶ್ವರ ಹರಿದಾಸ ನಿಧನ

ಜಿಲ್ಲೆಯಲ್ಲಿ ಡ್ರಗ್ಸ್‌, ಮಟ್ಕಾ, ಅಕ್ರಮ ರೇತಿ, ಕ್ಲಬ್‌ ಹಾವಳಿ ಹೆಚ್ಚಿದೆ ಅನ್ನೋದು ಗೊತ್ತಾಗಿದೆ. ಒಂದು ವೇಳೆ ಇಂತಹ ಪ್ರಕರಣದಲ್ಲಿ ಪೊಲೀಸರು ಭಾಗಿಯಾದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬರುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಠಾಣೆಯ ಸಿಬ್ಬಂದಿಗೆ ವಿಸ್ತರಿಸಿ ಹೇಳಿದರು. ಈ ಹಿಂದೆ ಹೊನ್ನಾವರ, ಕಾರವಾರ ಮತ್ತು ರಾಮನಗರದಲ್ಲಾದ ಘಟನೆಗಳನ್ನು ದೃಷಾಂತರಿಸಿ ಹೇಳಿದ ಪೊಲೀಸ್ ವರಿಷ್ಠಾಧಿಕಾರಿಗಳು, ಈ ರೀತಿಯ ಘಟನೆಗಳು ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ಯಾವುದೇ ಪ್ರಕರಣವನ್ನೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ, ಬೇರೆ ರೀತಿಯಾದ ಬೆಳವಣಿಗೆಗಳಾಗುತ್ತೆ. ಅಂತಹವುಗಳಿಗೆ ಆಸ್ಪದ ನೀಡಬಾರದು ಎಂದು ಸೂಚನೆ ನೀಡಿದರು.

ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ

ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಹೊಸ ಕಾನೂನಿನ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಹೊಸದಾಗಿ ಸಾಮಾಜಿಕ ಸೇವೆ(community service) ಎನ್ನುವ ಕಾನೂನು ಜಾರಿಗೆ ಬಂದಿದೆ. ಪದೇ ಪದೇ ಓರ್ವ ವ್ಯಕ್ತಿ ಸಣ್ಣ ಪುಟ್ಟ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದರೆ ಸ್ವಚ್ಛತೆ ಕೆಲಸಗಳಿಗೆ ಆತನನ್ನು ತೊಡಗಸಿಕೊಳ್ಳಲಾಗುವದು ಎಂದರು.

ನಾಳೆಯಿಂದ ಪೊಲೀಸ್ ಡೇ:
ಹದಿಹರೆಯದ ಯುವಕರು ಡ್ರಗ್ಸ್ ಗಾಂಜಾ ಹಾಗೂ ಸಾಮಾಜಿಕ ಜಾಲತಾಣಗಳಿಂದ ದುಶ್ಚಟಗಳಿಗೆ ಬಲಿಯಾಗಬಾರದು ಎನ್ನುವ ಉದ್ದೇಶಕ್ಕಾಗಿ ಹಾಗೂ ಪೋಕ್ಸೊ ಪ್ರಕರಣ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಲು ನಾಳೆಯಿಂದ ಪ್ರತಿ ದಿನ ಶಾಲಾ_ಕಾಲೇಜುಗಳಲ್ಲಿ “ಪೊಲೀಸ್ ಡೇ” ಎನ್ನುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಎಂ.ನಾರಾಯಣ

೫ ವರ್ಷಕ್ಕಿಂತ ಮೇಲೆ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವವರನ್ನು ವರ್ಗಾವಣೆ ಮಾಡುವ ತೀರ್ಮಾನವನ್ನು ಡಿ.ವೈಎಸ್ಪಿ ಗಳ ಜೊತೆಯಲ್ಲಿ ಮಾತುಕತೆ ನಡೆಸಿ ಮಾಡಲಾಗುವುದು.
ಎಂ.ನಾರಾಯಣ, ಎಸ್ಪಿ.

ಭಟ್ಕಳದ ಸಾರ್ವಜನಿಕರು ಹಾಗೂ ತಂಜೀಮ್‌ ಸದಸ್ಯರು ಪೊಲೀಸ್‌ ವರಿಷ್ಠಾಧಿಕಾರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿ, ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ ಎಂ.ಕೆ., ನಗರ ಠಾಣೆ ಸಿ.ಪಿ.ಐ. ಗೋಪಿಕೃಷ್ಣ, ಗ್ರಾಮೀಣ ಸಿ.ಪಿ.ಐ. ಚಂದನ ಗೋಪಾಲ ಮತ್ತಿತರರು ಉಪಸ್ಥಿತರಿದ್ದರು