ಭಟ್ಕಳ : ಇಲ್ಲಿನ ರೋಟರಿ ಕ್ಲಬ್ ಸಂಸ್ಥೆಯು ಕುಂದಾಪುರದ ಇಂಡಿಯನ್ ರೆಡಕ್ರಾಸ್ ಸೊಸೈಟಿ ಬ್ಲಡ್ ಸೆಂಟರ್ ಸಹಭಾಗಿತ್ವದಲ್ಲಿ ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದೆ.
ಇದನ್ನೂ ಓದಿ : ಸಮುದ್ರ ಪಾಲಾಗುತ್ತಿದ್ದ ೧೫ ವರ್ಷದ ಬಾಲಕನ ರಕ್ಷಿಸಿದ ೧೨ರ ಬಾಲಕ!
ಭಟ್ಕಳ ತಾಲೂಕಿನ ರೋಟರಾಕ್ಟ, ಇಂಟರಾಕ್ಟ ಸಂಸ್ಥೆಗಳು, ಎನ್.ಎಸ್.ಎಸ್. ಘಟಕ, ಯುಥ್ ರೆಡ್ ಕ್ರಾಸ್ ಘಟಕ, ಉನ್ನತ ಭಾರತ ಅಭಿಯಾನ ಘಟಕ, ಚುನಾವಣಾ ಸಾಕ್ಷರತಾ ಕ್ಲಬ್ ಗಳ ಸಹಕಾರದೊಂದಿಗೆ ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಭಟ್ಕಳ ಪಟ್ಟಣದ ಸಾಗರ ರಸ್ತೆಯ ಶ್ರೀ ಗುರು ಸುಧೀಂದ್ರ ಡಿಗ್ರಿ ಕಾಲೇಜಿನ ಇನ್ಳೋಸಿಸ್ ಬ್ಲಾಕ್ ನಲ್ಲಿ ಮೇ ೩, ಶುಕ್ರವಾರದಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ರಕ್ತದಾನ ಜರುಗಲಿದೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕೆಂದು ರೋಟರಿ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.