ಭಟ್ಕಳ: ತಾಲೂಕಿನಲ್ಲಿ ಪೊಲೀಸ್ ಚೆಕ್ ಪೋಸ್ಟ್ಗಳನ್ನು ನಿಷ್ಕ್ರಿಯಗೊಳಿಸಿ ರಾಜಾರೋಷವಾಗಿ ಅಕ್ರಮ ಗೋಸಾಗಾಟಕ್ಕೆ ಅನುವು ಮಾಡಿಕೊಡಲಾಗಿದೆ. ಹಿಂದೂ ಕಾರ್ಯಕರ್ತರನ್ನು ಆಗೌರವದಿಂದ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿ ಶನಿವಾರದಂದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ, ನಾನು 5 ವರ್ಷ ಶಾಸಕನಾಗಿದ್ದ ವೇಳೆ ಎಲ್ಲಾ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ತಮ್ಮ ಕರ್ತವ್ಯ ನಿಬಾಯಿಸಿಕೊಂಡು ಹೋಗುತ್ತಿದ್ದರು. ಎಲ್ಲಾ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವು. ಆದರೆ ಈಗ ಎಲ್ಲಾ ಚೆಕ್ ಪೋಸ್ಟ್ ಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಕ್ರಮದಾರರಿಗೆ ಸಹಕಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಪ್ರತಿ ದಿನ ಲೋಡಗಟ್ಟಲೆ ಗೋ ಸಾಗಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಎಲ್ಲಾ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯದಲ್ಲಿ ೪೦೦ ಕ್ಕೂ ಅಧಿಕ ಕೊಲೆ ಪ್ರಕರಣ ನಡೆದಿದೆ. ಇದಕ್ಕೆಲ್ಲ ಸಹಕಾರ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಅಕ್ರಮವಾಗಿ ಗೋ ಸಾಗಾಟ: ಬಿಜೆಪಿ ಆರೋಪ
ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಪ್ರತಿದಿನ ಅತಿ ಹೆಚ್ಚು ಗೋ ಸಾಗಾಟ ನಡೆಯುತ್ತಿದೆ. ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಚೆಕ್ ಪೋಸ್ಟ್ ಗಳನ್ನು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಸಚಿವರ ಮಾತನ್ನು ಕೇಳುವುದು ನಿಲ್ಲಿಸಿ ತಮ್ಮ ಕರ್ತವ್ಯ ನಿರ್ವಹಿಸುವ ಕೆಲಸ ಮಾಡಬೇಕು. ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುವುದು ಯಾರಿಗೂ ಶ್ರೇಯಸ್ಸು ತರುವುದಿಲ್ಲ. ಇನ್ನು ಮುಂದೆ ದಿನದ ೨೪ ಗಂಟೆಗಳ ಕಾಲ ಚೆಕ್ ಪೋಸ್ಟ್ ಸಿಸಿಟಿವಿ ಮುಖಾಂತರ ಕಾರ್ಯ ನಿರ್ವಹಿಸಬೇಕು ಎಂದರು
ಇದನ್ನೂ ಓದಿ : ಸಚಿವ ಮಂಕಾಳ ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ ನಾಯ್ಕ ಗಂಭೀರ ಆರೋಪ
ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಅಕ್ರಮ ಗೋ ಸಾಗಾಣಿಕೆ ವಿರುದ್ಧ ಸಾಂಕೇತಿಕವಾಗಿ ನಾವು ಎಸಿ ಕಚೇರಿಯ ಮುಂದೆ ಪ್ರತಿಭಟನೆಗೆ ಕುಳಿತು ಕೊಂಡಿದ್ದೇವೆ. ಭಟ್ಕಳದಲ್ಲಿ ಅಕ್ರಮ ಗೋಸಾಗಾಟ ನಿರಂತರವಾಗಿ ನಡೆಯುತ್ತಿದೆ. ಇದರ ಅರ್ಥ ಅಧಿಕಾರಿಗಳು ಮತ್ತು ಸರ್ಕಾರ ಕಳ್ಳರಿಗೆ ಸಹಕಾರ ನೀಡುತ್ತಿದೆ. ಭಾರತೀಯ ಜನತಾ ಪಾರ್ಟಿ ಸುಮ್ಮನಿದೆ ಎಂದು ತಿಳಿದುಕೊಳ್ಳಬೇಡಿ. ಮೊನ್ನೆ ನಮ್ಮ ಕಾರ್ಯಕರ್ತರು ಗೋ ಕಳ್ಳತನದ ಬಗ್ಗೆ ತಿಳಿಸಿ ಚೆಕ್ ಪೋಸ್ಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಆಗ ಅಧಿಕಾರಿಗಳು ಏಕಾಏಕಿ ಶರ್ಟ್ ಹಿಡಿಯುವಂತಹ ಕೆಲಸ ಮಾಡಿದ್ದಾರೆ. ಆದರೆ ಅದಕ್ಕೆ ಉತ್ತರ ಕೊಡುವುದು ನಮಗೂ ಗೊತ್ತಿದೆ. ನಾವು ಸುಮ್ಮನೆ ಇದ್ದೇವೆ ಅಂತ ನೀವು ಭಾವಿಸಬಾರದು. ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದ ದರ್ಪ ಬಹಳ ದಿನ ನಡೆಯುವುದಿಲ್ಲ. ಹೆಚ್ಚೆಂದರೆ ಇನ್ನೊಂದು ಸ್ವಲ್ಪ ದಿನ ನಡೆಯಬಹುದು. ಅಧಿಕಾರಿಗಳಿಗೆ ಒಂದು ಕಿವಿ ಮಾತು ಹೇಳುತ್ತೇನೆ. ನೀವು ಯಾವುದೇ ಸರ್ಕಾರವಿದ್ದರೂ ನಿಷ್ಪಕ್ಷಪಾತವಾಗಿ ಕರ್ತವ್ಯ ಮಾಡಬೇಕು. ಯಾವುದೇ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಹಿಂಸಾತ್ಮಕವಾಗಿ ಕೋಣ ಸಾಗಾಟ ಯತ್ನ ; ಇಬ್ಬರ ಬಂಧನ, ಓರ್ವ ಪರಾರಿ
ಈಗಾಗಲೇ ಸಾವಿರಾರು ಗೋವು ಭಟ್ಕಳ ಪಟ್ಟಣದಲ್ಲಿ ಜಮಾ ಆಗಿದೆ. ಹೀಗೆ ಸಾವಿರಾರು ಗೋವು ಜಮಾ ಆಗಲು ಹೊಣೆ ಯಾರು? ಇದಕ್ಕೆ ನೇರ ಹೊಣೆ ರಾಜ್ಯದ ಸರ್ಕಾರ. ಈ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಇಲ್ಲಿಯ ಎಲ್ಲಾ ಅಧಿಕಾರಿಗಳಾಗಿದ್ದಾರೆ. ಅಕ್ರಮ ಗೋಸಾಗಾಟವನ್ನು ನೀವು ತಡೆಯದಿದ್ದರೆ, ನಮ್ಮ ಕಾರ್ಯಕರ್ತರು ತಡೆಯುವುದು ಅನಿವಾರ್ಯ. ಗೋಸಾಗಾಟ ತಡೆದಾಗ ಕಾನೂನು ಚೌಕಟ್ಟಿನಲ್ಲಿ ಏನು ನಡೆಯುತ್ತದೆ ಅದು ಒಂದು ಭಾಗವಾಗಿರುತ್ತದೆ. ನಾವು ತಡೆಯಬೇಕಾದರೆ ಎಲ್ಲಾ ಹೋರಾಟಕ್ಕೆ ಸಿದ್ದರಾಗಿ ತಡೆಯುತ್ತಿದ್ದೇವೆ. ಗೋ ರಕ್ಷಣೆಗಾಗಿ ಬಲಿದಾನ ಮಾಡಿದಂತಹ ಉದಾಹರಣೆಗಳಿವೆ. ರಾಮಾಯಣ ಸಹಿತ ಎಲ್ಲಾ ಕಾಲದಲ್ಲಿಯೂ ಗೋರಕ್ಷಕರು ಇದ್ದರು ಎಂದರು.
ಇದನ್ನೂ ಓದಿ : ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ವರ್ಧಂತಿ
ಅಧಿಕಾರಿಗಳು ಭಟ್ಕಳದ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಬಲಪಡಿಸಬೇಕು. ಸಿಬ್ಬಂದಿ ನೇಮಿಸಿ ಅಕ್ರಮ-ಸಾಗಾಟ ತಡೆಯಬೇಕು. ತಡೆಯದಿದ್ದರೆ ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟವನ್ನು ಮಾಡಬೇಕಾದೀತು. ಅಧಿಕಾರಿಗಳು ನಮ್ಮ ಕಾರ್ಯಕರ್ತರೊಂದಿಗೆ ಸೌಜನ್ಯದಿಂದ ಮಾತನಾಡುವುದನ್ನು ಕಲಿಯಬೇಕು. ನಮ್ಮ ಕಾರ್ಯಕರ್ತರಿಗೆ ಹೆದರಿಸುವ ಬಗ್ಗೆ ತಿಳಿದುಬಂದಲ್ಲಿ ಮುಂದಿನ ದಿನಗಳಲ್ಲಿ ನಾವು ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಅನಿವಾರ್ಯವಾಗಬಹುದು ಎಂದರು.
ಇದನ್ನೂ ಓದಿ : ಪರೀಕ್ಷೆ ಮುಗಿದ ಬೆನ್ನಲ್ಲೇ ಫಲಿತಾಂಶ ಪ್ರಕಟ : ಹೊಸ ದಾಖಲೆ ಬರೆದ ವಿಟಿಯು
ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ. ಈಗಾಗಲೇ ೬ ತಿಂಗಳ ತನಕ ಎಲ್ಲವನ್ನೂ ಅನುಭವಿಸಿದ್ದೇವೆ. ಮುಂದಿನ ದಿನಗಳಲ್ಲಿ ಜೀವನ ಪೂರ್ತಿ ಸಾವರ್ಕರ್ ರಂತೆ ಬದುಕಲು ಕೂಡ ಸಿದ್ಧರಿದ್ದೇವೆ. ಅದರ ಜೊತೆ ಅಧಿಕಾರಿಗಳನ್ನು ಕೂಡ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದರು.
ಇದನ್ನೂ ಓದಿ : ವಿಶ್ವದರ್ಶನ ಕೇಂದ್ರೀಯ ಶಾಲೆಯ ಶಿಕ್ಷಕರಿಗೆ ತರಬೇತಿ ಕಾರ್ಯಗಾರ
ಇದಕ್ಕೂ ಪೂರ್ವದಲ್ಲಿ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಸಂಶುದ್ದೀನ್ ವೃತ್ತ ಮಾರ್ಗವಾಗಿ ತಾಲೂಕಾಡಳಿತಕ್ಕೆ ತಲುಪಿತು. ವಿಶೇಷ ಎಂಬಂತೆ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಜೊತೆಯಲ್ಲಿ ಭಟ್ಕಳ ಬಸ್ ನಿಲ್ದಾಣದ ತನಕ ಆಕಳೊಂದು ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಇದನ್ನೂ ಓದಿ : ಮೀನುಗಾರಿಕೆಗೆ ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಮೀನುಗಾರ ಸಾವು
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ತ, ಸುಬ್ರಾಯ ದೇವಡಿಗ, ಭಾಸ್ಕರ ದೈಮನೆ, ಇತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಎಐಟಿಎಂ ಕಾಲೇಜಿಗೆ ಶೇ. 100 ಫಲಿತಾಂಶ