ಭಟ್ಕಳ : ಪಟ್ಟಣದ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ವಿನಾಯಕ ರಂಗಮಂದಿರದಲ್ಲಿ ಭಾರತ್ ಅಕ್ಕಿ ಬ್ಯಾಗನ್ನು ಜನತೆ ಮುಗಿಬಿದ್ದು ಖರೀದಿಸಿದರು.

ಇದನ್ನೂ ಓದಿ : ನಾಮಧಾರಿ ಪ್ರೀಮಿಯರ್ ಲೀಗ್-21 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಭಟ್ಕಳಕ್ಕೆ 10 ಕೆಜಿಯ 2000 ಬ್ಯಾಗ್ ಅಕ್ಕಿ (200 ಕ್ವಿಂಟಾಲ್) ಬಂದಿತ್ತು. ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ವಿವಿಧ ಭಾಗದ ಜನರು ಆಗಮಿಸಿ 10 ಕೆಜಿಗೆ 290 ರೂಪಾಯಿ ಕೊಟ್ಟು ಅಕ್ಕಿ ಖರೀದಿಸಿದರು. ಅಕ್ಕಿ ಖರೀದಿಸಲು ಮಹಿಳೆಯರು ಮತ್ತು ಪುರಷರಿಗಾಗಿ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಗುರುವಾರ ಸಂಜೆಯೇ ಭಾರತ್ ಅಕ್ಕಿಯ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗಿತ್ತು. ಹೀಗಾಗಿ ಅಕ್ಕಿ ಖರೀಧಿಸಲು ಜನರು ಮುಗಿಬೀಳುವಂತಾಗಿತ್ತು.

ಈ ವಿಡಿಯೋ ನೋಡಿ : ನಾನೇ ಬೇರೆ… ನನ್ ಸ್ಟೈಲೇ ಬೇರೆ    https://www.facebook.com/share/r/tfgGQitG3kYxumx4/?mibextid=oFDknk

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಬಿಜೆಪಿ ನೂತನ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಪ್ರಮುಖರಾದ ದಿನೇಶ ನಾಯ್ಕ, ರಾಜೇಶ ನಾಯ್ಕ, ಮೋಹನ ನಾಯ್ಕ, ಚಂದ್ರು ಗೊಂಡ, ವಿಷ್ಣುಮೂರ್ತಿ ಹೆಗಡೆ ಮುಂತಾದವರಿದ್ದರು. ನೂಕುನುಗ್ಗಲು ಉಂಟಾಗದಂತೆ ಸುಸೂತ್ರವಾಗಿ ಖರೀದಿಗೆ ಬಿಜೆಪಿ ಪ್ರಮುಖರು ನೆರವಾದರು. ಬಂದಿದ್ದ ಅಕ್ಕಿ ಚೀಲಗಳು ಮಧ್ಯಾಹ್ನದೊಳಗೆ ಖಾಲಿಯಾಗಿತ್ತು.