ಕುಂದಾಪುರ : ನೊಂದವರಿಗೆ ನೆರವಿನ ದಾರಿ ದೀಪ- ಯುವ ಮನಸ್ಸುಗಳಿಗೆ ಸ್ಫೂರ್ತಿಯಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ ಸಂಸ್ಥೆಯು ಇತ್ತೀಚೆಗೆ ನಡೆದ ಮಂದಾರ್ತಿ ಹಬ್ಬದಲ್ಲಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತು.

ಇದನ್ನೂ ಓದಿ : ಕನ್ನಡಿಗ-ಕನ್ನಡತಿ ಮದುವೆ ಹೇಗಿತ್ತು ಗೊತ್ತಾ?

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಗೆಂಡ ಸೇವೆ ಹಾಗೂ ರಥೋತ್ಸವದ ಜಾತ್ರೆಯಲ್ಲಿ ಅನಾರೋಗ್ಯ ಪೀಡಿತ ಪುಟ್ಟ ಮಕ್ಕಳ ಚಿಕಿತ್ಸೆಯ ವೆಚ್ಚವಾಗಿ, ಎರಡು ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದ, ಕ್ಯಾನ್ಸರ್ ಕಾಯಿಲೆಯಿಂದ ಬಳತ್ತಿರುವವರಿಗಾಗಿ ದೇಣಿಗೆ ಸಂಗ್ರಹ ನಡೆಯಿತು. ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಮಾರಿಯಮ್ಮ ಚಂಡೆ ಬಳಗದ ಚಂಡೆ ವಾದನದ ಮೂಲಕ ಮೆರವಣಿಗೆಯಲ್ಲಿ ದೇಣಿಗೆ ಸಂಗ್ರಹಿಸಲಾಯಿತು.

ಈ ವಿಡಿಯೋ ನೋಡಿ : ಸರ್ಕಾರಿ ಶಾಲೆಯಲ್ಲಿ ಇಕೋ ಪಾರ್ಕ್  https://fb.watch/qsrgS2pnkK/?mibextid=Nif5oz

ಕಳೆದ 6-7ವರ್ಷಗಳಿಂದ ಸಂಸ್ಥೆಯ ಜೊತೆಗೆ ಸಕ್ರಿಯವಾಗಿ ಯೋಜನೆಗಳಿಗೆ ಸಹಕಾರ, ಪ್ರೋತ್ಸಾಹ ನೀಡುವ ಗೌರವ ಸಲಹೆಗಾರರಾದ ಆದಿತ್ಯ ಕೋಟ ಅವರು ಆಂಜನೇಯ ವೇಷ ಧರಿಸಿ ತಂಡಕ್ಕೆ ಸಾಥ್ ನೀಡಿದರು. ಮಂದಾರ್ತಿ ಹಬ್ಬದಲ್ಲಿ ದೇಣಿಗೆ ಸಂಗ್ರಹ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ದಿವ್ಯ ಕುಂದಾಪುರ, ಮನೀಶ್ ಕುಲಾಲ್ ಜನ್ನಾಡಿ, ಸಂತು ಕೋಟ, ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಯೋಜನೆಗೆ ಧನ ಸಹಾಯ ಮಾಡಿದವರಿಗೆ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪುಂಡಲೀಕ ಮೊಗವೀರ್ ತೆಕ್ಕಟ್ಟೆ ಕೃತಜ್ಞತೆ ಸಲ್ಲಿಸಿದ್ದಾರೆ.