ಕುಮಟಾ : ಹಗ್ಗದಿಂದ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಧಾರೇಶ್ವರ ಚಿಟ್ಟಿ ಹತ್ತಿರ ನಡೆದಿದೆ. ಧಾರೇಶ್ವರದ ಕೃಷಿಕ ನಾಗಪ್ಪ ಪರಮೇಶ್ವರ ದೇಶಭಂಡಾರಿ(೬೨) ಮರಕ್ಕೆ ಆತ್ಮಹತ್ಯೆ ಮಾಡಿಕೊಂಡವರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಇವರು ಜೂನ್ ೨೮ರಂದು ಬೆಳಿಗ್ಗೆ ೧೧.೩೦ರಿಂದ ನಾಪತ್ತೆಯಾಗಿದ್ದರು. ಆದರೆ, ಜೂನ್ ೩೦ರಂದು ಬೆಳಿಗ್ಗೆ ೧೧.೪೫ಕ್ಕೆ ಇವರ ಮೃತದೇಹ ಪತ್ತೆಯಾಗಿದೆ. ಧಾರೇಶ್ವರ ಚಿಟ್ಟಿ ಹತ್ತಿರ ಇರುವ ಒಂದು ಕಾಡು ಜಾತಿಯ ಮರಕ್ಕೆ ನೈಲಾನ್ ಹಗ್ಗ ಕಟ್ಟಿ ಅದನ್ನು ಕುತ್ತಿಗೆಗೆ ಸುತ್ತಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮೃತನ ಮಗ ನಾಗರಾಜ (೩೨) ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

ದೂರಿನಲ್ಲೇನಿದೆ ?
ಮೃತರು ತುಂಬಾ ಸಾರಾಯಿ ಕುಡಿಯವ ಚಟದಿಂದ ಇದ್ದವರು. ಮನೆಯಲ್ಲಿ ಸಾರಾಯಿ ಕುಡಿಯಬೇಡ ಅಂತಾ ಎಷ್ಟು ಹೇಳಿದರೂ ಕೇಳದೆ ವಿಪರೀತ ಸರಾಯಿ ಕುಡಿಯುತ್ತಿದ್ದರು. ಜೂನ್ ೨೮ರಂದು ಬೆಳಗ್ಗೆ ೧೧.೩೦ ಗಂಟೆಯಿಂದ ಜೂನ್ ೩೦ ರಂದು ೧೧.೪೫ ಗಂಟೆಯ ನಡುವಿನ ಅವಧಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಸಾರಾಯಿ ಕುಡಿಯುವ ಚಟದಿಂದಲೋ ಅಥವಾ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ಜೀವನದಲ್ಲಿ ಜಿಗುಪ್ಪೆಗೊಂಡು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ವಿದ್ಯಾರ್ಥಿಗಳು ನಾಡು ನುಡಿ ಅಭಿಮಾನವನ್ನು ಬೆಳೆಸಿಕೊಳ್ಳಬೇಕು : ಡಾ.ಪುಷ್ಪಲತಾ