ವಿಜಯಪುರ/ಬೆಳಗಾವಿ: ಮಾಜಿ ಎಮ್ಮೆಲ್ಸಿ ವಿಜಯಪುರದ ಅರುಣ ಶಹಾಪೂರ ಹೆಸರಲ್ಲಿ ಇನ್ ಸ್ಟಾಗ್ರಾಂ ನಲ್ಲಿ ನಕಲಿ ಖಾತೆ ತೆರೆಯಲಾಗಿದೆ.

ಈ ಖಾತೆಯಲ್ಲಿ ಮಾಜಿ ಎಮ್ಮೆಲ್ಸಿ ಅರುಣ ಶಹಾಪೂರ ಅವರ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಹಲವರಿಗೆ ಸ್ನೆಹದ ಮನವಿ ಕಳಿಸಲಾಗಿದೆ. ಫಾಲೋವ್ ಮಾಡಿದವರಿಗೆ ಹಣದ ಬೇಡಿಕೆ ಇಡಲಾಗುತ್ತಿದೆ. ಈ ಖಾತೆ ಇನ್ನೂ ಚಾಲ್ತಿಯಲ್ಲಿದೆ.

ಇದನ್ನೂ ಓದಿ : ದಾಂಡೇಲಿಗೆ ಬರುತ್ತಿದ್ದ ಬಾಗಲಕೋಟೆಯ ಖ್ಯಾತ ವಕೀಲ ಅಪಘಾತದಲ್ಲಿ ಸಾವು

ಕಮಿಷನರ್ ಪತ್ನಿ ಹೆಸರಲ್ಲೂ ವಂಚನೆ
ಬೆಳಗಾವಿ ನಗರದ ಪೊಲೀಸ್ ಕಮಿಷನರ್ ಪತ್ನಿ ಹೆಸರಲ್ಲಿ ನಕಲಿ ಫೇಸ್‌ ಬುಕ್ ತೆರೆದು ಅವರ ಸ್ನೇಹಿತರಿಂದ ಹಣಕ್ಕೆ ಬೇಡಿಕೆ ಇಟ್ಟು ವಂಚಿಸಿದ್ದಾರೆ. ಖಾತೆ ತೆರೆದ ವಂಚಕರು, ಕಮಿಷನರ್ ಪತ್ನಿಯ ಭಾವಚಿತ್ರಗಳನ್ನು ಬಳಸಿಕೊಂಡು ನಕಲಿ ಖಾತೆ ತೆರೆದ ಆರೋಪಿಗಳು, ಹಲವು ಜನರಿಗೆ ಸ್ನೇಹದ ಮನವಿ ಕಳುಹಿಸಿದ್ದರು. ಮನವಿ ಸ್ವೀಕರಿಸಿದವರಿಗೆ ಹಣಕ್ಕೆ ಬೇಡಿಕೆ ಇಟ್ಟು ಪಡೆದುಕೊಂಡಿದ್ದಾರೆ. ಈ ಬಗ್ಗೆ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಡಿಯೋ ವರದಿ ನೋಡಿ : ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆ