ಮುಂಡಗೋಡ : ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಾರು ತಾಲೂಕಿನ ಹಾರವಳ್ಳಿ‌‌ ಗ್ರಾಮದ ಬಳಿ ಅಪಘಾತವಾಗಿದೆ.

ಇದನ್ನೂ ಓದಿ : ಮುರುಡೇಶ್ವರ : ಭಕ್ತಸಾಗರದಲ್ಲಿ ಮಿಂದೆದ್ದ ಶಿವಭಕ್ತರು

ಮಾಜಿ ಶಾಸಕ‌ ವಿ ಎಸ್ ಪಾಟೀಲ ಬನವಾಸಿಯಿಂದ ಪಾಳಾ- ರಾಮಪೂರ ಮಾರ್ಗವಾಗಿ ತಮ್ಮ ಗ್ರಾಮ ಅಂದಲಗಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಆನಂದ ಆಲೂರನಿಗೆ ಕಣ್ಣಿಗೆ ಹಾಗೂ ಮಾಜಿ ಶಾಸಕ ವಿ ಎಸ್ ಪಾಟೀಲರಿಗೆ ಎದೆಗೆ ಪೆಟ್ಟು ತಗುಲಿದೆ.
ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಮಾಜಿ‌ ಶಾಸಕ ಪಾಟೀಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಈ ವಿಡಿಯೋ ನೋಡಿ : ಮುರುಡೇಶ್ವರ ದರ್ಶನ ಪಡೆದ ಮಂಕಾಳ ವೈದ್ಯ  https://fb.watch/qGJkFTh18v/?mibextid=Nif5oz

ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಒಂದು‌ ಬಾರಿ‌ ಬಿಜೆಪಿಯಿಂದ ಶಾಸಕರಾಗಿದ್ದ ವಿ.ಎಸ್. ಪಾಟೀಲ್, ಮೃದು-ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರು.