ಭಟ್ಕಳ : ತಾಲೂಕಿನ ಅಳ್ವೆಕೋಡಿ-ಸಣಬಾವಿಯಲ್ಲಿ ಶ್ರೀ ವಿಶ್ವಶಕ್ತಿ ದೇವಸ್ಥಾನ ಆರ್ಕಟಿಮನೆಯಲ್ಲಿ ಸಂಪೂರ್ಣ ನಾಗಮಂಡಲ ಮಾರ್ಚ್ ೧೫ರಿಂದ ೨೧ರವರೆಗೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ : ನಾಗಮಾಸ್ತಿ ದೇವರ ವರ್ಧಂತ್ಯೋತ್ಸವ ನಾಳೆ

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಶ್ರೀ ದೇವಿದಾಸ ಸ್ವಾಮಿಗಳು ಆರ್ಕಟಿಮನೆ ಮತ್ತು ಕುಟುಂಬಿಕರು ಹಾಗೂ ಬಂಧು-ಮಿತ್ರರು ಆರಾಧಿಸಿ, ಪೂಜಿಸಿಕೊಂಡು ಬರುತ್ತಿರುವ ಶ್ರೀ ದೇವರ ಬನದಲ್ಲಿ ನಾಗಮಂಡಲ ಏರ್ಪಡಿಸಲಾಗಿದೆ.

ಈ ವಿಡಿಯೋ ನೋಡಿ : ಮಕ್ಕಳಿಂದ ಪಾಲಕರ ಪಾದಪೂಜೆ  https://fb.watch/qMfVMhDKSg/?mibextid=Nif5oz

ಮಾರ್ಚ್ಬ೨೧ರಂದು ಸಂಜೆ ನಾಗಬನದಲ್ಲಿ ಹಾಲಿಟ್ಟು ಸೇವೆ, ಮಂಡಲ ಪೂಜೆ ನಡೆದು ಬಳಿಕ ದಿವ್ಯ ಮಂಟಪದಲ್ಲಿ ರಾತ್ರಿ ೯ರಿಂದ ಷೋಡಶ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಾಗಕನ್ನಿಕೆಯರಾಗಿ ಬಾಲಚಂದ್ರ ವೈದ್ಯ, ಹರಿಶ್ಚಂದ್ರ ವೈದ್ಯ, ಬಾಲಕೃಷ್ಣ ವೈದ್ಯಹಾಗೂ ನಟರಾಜ ವೈದ್ಯ ಮತ್ತು ವೈದ್ಯರಾಗಿ ಗೋಳಿಯಂಗಡಿಯ ವಾಸುದೇವ ವೈದ್ಯ ಮತ್ತು ಬಳಗ ಹಾಗೂ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರು ನಾಗಮಂಡಲ ನಡೆಸಿಕೊಡಲಿದ್ದಾರೆ.

ಮಾರ್ಚ್ ೧೫ರಿಂದ ನಡೆಯುವ ಈ‌ ಕಾರ್ಯಕ್ರಮದ ಅಂಗವಾಗಿ ಪ್ರತಿ ದಿನ ರಾತ್ರಿ ಶ್ರೀ ದೇವರ ಅನ್ನಪ್ರಸಾದ ಇರಲಿದೆ. ಹೊರೆ ಕಾಣಿಕೆ ನೀಡುವವರು ಮಾರ್ಚ ೧೮ರವರೆಗೆ ನೀಡಬಹುದು ಎಂದು ಶ್ರೀ ದೇವಿದಾಸ ಸ್ವಾಮಿಗಳು ಆರ್ಕಟಿಮನೆ ತಿಳಿಸಿದ್ದಾರೆ.