ಭಟ್ಕಳ : ಮೀನುಗಾರಿಕೆಗೆ ತೆರಳಿದ ವೇಳೆ ಆಕಸ್ಮಿಕವಾಗಿ ಮೀನಿನ ಬಲೆಗೆ ಸಿಲುಕಿ ಮೀನುಗಾರನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಕೆ ಮೊಗೇರಕೇರಿ ಹೊಳೆಯಲ್ಲಿ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮೃತ ಮೀನುಗಾರನನ್ನು ಸ್ಥಳೀಯ ಮಂಜುನಾಥ ವೆಂಕ್ಟ ಮೊಗೇರ (62) ಎಂದು ತಿಳಿದು ಬಂದಿದೆ. ಇವರು ಬುಧವಾರ(ಮೇ ೨೯) ಸಂಜೆ ೪ ಗಂಟೆ ವೇಳೆಗೆ ಬೆಳಕೆ ಹೊಳೆಗೆ ಬೀಸು ಬಲೆ ತೆಗೆದುಕೊಂಡು ಮೀನುಗಾರಿಕೆಗೆ ಹೋಗಿದ್ದರು. ಮೀನು ಹಿಡಿಯಲು ಬಲೆ ಬೀಸಿದಾಗ ಆಕಸ್ಮಿಕವಾಗಿ ಬಲೆಯ ಕೈ ದಾರ ಕೊರಳಿಗೆ ಸುತ್ತಿಕೊಂಡು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಎಐಟಿಎಂ ಕಾಲೇಜಿಗೆ ಶೇ. 100 ಫಲಿತಾಂಶ