ಭಟ್ಕಳ: ಮುರುಡೇಶ್ವರದ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಬುಧವಾರ ಮುರುಡೇಶ್ವರದ ಶಾದಿ ಮಹಲ್ ನಲ್ಲಿ ಸೌಹಾರ್ದ ಕಾರ್ಯಕ್ರಮ ಜರುಗಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮುಖ್ಯ ಅತಿಥಿಯಾಗಿ ಮಾತನಾಡಿದ ಆರ್.ಎನ್.ಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಎಂ.ವಿ.ಹೆಗಡೆ, ಮುರುಡೇಶ್ವರದಲ್ಲಿ ಜನರು ಯಾವತ್ತೂ ಸೌಹಾರ್ದತೆಯಿಂದ ಬಾಳಿ ಬದುಕುತ್ತಿದ್ದಾರೆ. ಇಲ್ಲಿನ ಸೌಹಾರ್ದತೆ ಇತರರಿಗೆ ಮಾದರಿಯಾಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆಯಾಗಿದೆ ಎಂದರು.
ಇದನ್ನೂ ಓದಿ : ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ತಾಳಮದ್ದಳೆ ಪ್ರದರ್ಶನ
ನಮ್ಮಲ್ಲಿನ ಪ್ರತಿಯೊಬ್ಬರಲ್ಲಿ ಹರಿಯುತ್ತಿರುವ ರಕ್ತ ಒಂದೇ ಆಗಿದೆ. ಸೇವಿಸುವ ಗಾಳಿ, ನೀರು ಎಲ್ಲವೂ ಒಂದೇ ಆಗಿರುವಾಗ ನಮ್ಮಲ್ಲಿನ ಈ ಬೇಧ-ಭಾವ ಯಾಕೆ ಎಂದು ನನಗೆ ಗೊತ್ತಾಗುತ್ತಿಲ್ಲ. ನಮಗೆ ಸಿಕ್ಕಿರುವ ಈ ಅಲ್ಪ ಜೀವನದಲ್ಲಿ ದ್ವೇಷ, ಜಗಳ ಬದಿಗಿಟ್ಟು ಬದುಕುವುದನ್ನು ಕಲಿಯೋಣ ಎಂದು ಕರೆ ನೀಡಿದರು.
ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಶಂಭು ಹೆಗಡೆ ಮಾತನಾಡಿ, ನಾವೆಲ್ಲರೂ ಸೌಹಾರ್ದಯುತವಾಗಿಯೇ ಇದ್ದೇವೆ. ಆದರೆ ನಮ್ಮ ನಮ್ಮಲ್ಲಿ ದ್ವೇಷ ಭಾವನೆ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು. ನಾವು ಬಂದಿದ್ದು ಬರಿಗೈಯಿಂದ, ಹೋಗುವುದೂ ಬರಿಗೈಯಿಂದಲೇ. ಹಾಗಾಗಿ ನಾವು ಇದ್ದಷ್ಟು ದಿನ ಒಳ್ಳೆಯವರಾಗಿ ಬಾಳೋಣ ಎಂದರು.
ಇದನ್ನೂ ಓದಿ : ಭಟ್ಕಳಕ್ಕೆ ಭೇಟಿ ನೀಡಿದ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ
ಅಧ್ಯಕ್ಷತೆ ವಹಿಸಿದ್ದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಮಾತನಾಡಿ, ಭಯ ಮತ್ತು ದ್ವೇಷದ ನಡುವೆ ಶಾಂತಿ, ಪ್ರೀತಿ, ಸಹೋದರತೆಯ ಕುರಿತು ಚರ್ಚೆ ನಡೆಯುತ್ತಿರುವುದು ಶ್ಲಾಘನೀಯ. ನಾವು ದ್ವೇಷ, ಹಗೆತನ ಮೆಟ್ಟಿನಿಂತು ಪರಸ್ಪರರಲ್ಲಿ ನಂಬಿಕೆ, ಪ್ರೀತಿ ಸೌಹಾರ್ದತೆಯ ವಾತಾವರಣ ಸೃಷ್ಟಿ ಮಾಡಬೇಕು. ಧರ್ಮ ರಕ್ಷಣೆಯ ಹೆಸರಲ್ಲಿ ಅಧರ್ಮದ ಕೆಲಸ ಮಾಡುತ್ತಿರುವವರ ಕುರಿತು ಜಾಗೃತರಾಗಬೇಕು. ಸಮಾಜಘಾತುಕರು, ಸಮಾಜದ ಹಿತ ಬಸಯದೆ ಇರುವವರು ನಮ್ಮಲ್ಲಿ ಪರಸ್ಪರ ಕಚ್ಚಾಡುವಂತಹ ಸನ್ನಿವೇಶ ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ಸೌಹಾರ್ದಕೂಟಗಳ ಮೂಲಕ ನಾವು ಮನುಷ್ಯರನ್ನು ಪ್ರೀತಿಸಲು, ಹೃದಯಗಳನ್ನು ಬೆಸೆಯುವಂತಹ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಇದನ್ನೂ ಓದಿ : ಚಿತ್ರಾಪುರ ಮಠದ ಅರ್ಚಕ ರಾಮೇಶ್ವರ ಹರಿದಾಸ ನಿಧನ
ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಎಸ್.ಎಸ್. ಕಾಮತ, ಫಿಲಿಫ್ ಅಲ್ಮೆಡಾ, ಮೌಲಾನಾ ಸಕ್ರಾನ್ ನದ್ವಿ ಮಾತನಾಡಿದರು. ಡಾ. ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಡಾ.ಅಮೀನುದ್ದೀನ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಾವಳ್ಳಿ ಗ್ರಾ.ಪಂ. ಸದಸ್ಯ ನಾಗೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.