ಭಟ್ಕಳ: ಪಟ್ಟಣದ ಬಸ್ತಿ ರಸ್ತೆಯಲ್ಲಿರುವ ರಘುನಾಥ ದೇವಸ್ಥಾನದಲ್ಲಿ ಏ. ೧೫ರಿಂದ ೧೭ರವರೆಗೆ ರಾಮನವಮಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಇದನ್ನೂ ಓದಿ : ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಏ.೧೭ರಂದು

ಏಪ್ರಿಲ್ ೧೫ ರಂದು ದೇವತಾ ಪ್ರಾರ್ಥನೆ, ರಾಮದೇವರಿಗೆ ಪವಮಾನ ಅಭಿಷೇಕ, ಸೀತಾದೇವಿಗೆ ಶ್ರೀಸೂಕ್ತಾಭಿಷೇಕ, ಹನುಮಂತನಿಗೆ ವಾಯುಸ್ತುತಿ ಅಭಿಷೇಕ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

ಇದನ್ನೂ ಓದಿ : ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ರಾಮನವಮಿ, ವರ್ಧಂತ್ಯೋತ್ಸವ

ಮಹಿಳಾ ಭಜನಾ ಮಂಡಳಿ ಭಟ್ಕಳ ಇವರಿಂದ ಭಜನೆ, ಬಳಿಕ ವಸಂತ ಪೂಜೆ ನಡೆಯಲಿದೆ. ಏಪ್ರಿಲ್ 17ರಂದು ಸ್ಥಳ ಶುದ್ದಿ, ದೇವತಾ ಆವಾಹನ, ರಾಮತಾರಕ ಮಂತ್ರದ ಸಾಮೂಹಿಕ ಜಪಾರಂಭ, ಬೆಳಿಗ್ಗೆ 10 ಗಂಟೆಗೆ ರಾಮತಾರಕ ಮಂತ್ರದ ಹವನ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ರಾಮರಕ್ಷಾ ಪತಣ, ರಾಮ ಜನೋತ್ಸವ, ತೊಟ್ಟಿಲು ಸೇವೆ, 1 ಗಂಟೆಗೆ ಮಹಾಮಂಗಳಾರತಿ, ಮಹಾ ಸಂತರ್ಪಣೆ, ರಾತ್ರಿ 9 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ದೇವರ ಪಲ್ಲಕ್ಕಿಯನ್ನು ಭಟ್ಕಳ ಮೆಡಿಕಲ್ಸ್‌ನಿಂದ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಕರೆತಂದು ರಾಮಾಂಜನೇಯ ಸಮಾಗಮ ನಡೆಯಲಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಏಪ್ರಿಲ್ 16ರಂದು ದೇವತಾ ಪ್ರಾರ್ಥನೆ, ಗಣಪತಿ ಪೂಜನ, ಪುಣ್ಯಾಹವಾಚನ, ಪವಮಾನ, ಶ್ರೀ ಸೂಕ್ತ ಮತ್ತು ವಾಯುಸ್ತುತಿ, ಅಭಿಷೇಕ, ಶತಕಲಶಾಭಿಷೇಕ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ೭ ಗಂಟೆಯಿಂದ ೮.೩೦ ಗಂಟೆಯವರೆಗೆ ಸರಸ್ವತಿ ಮಹಿಳಾ ಭಜನಾ ಮಂಡಳಿ ಭಟ್ಕಳ ಇವರಿಂದ ಭಜನೆ, ಬಳಿಕ ವಸಂತ ಪೂಜೆ ನಡೆಯಲಿದೆ.

ಏಪ್ರಿಲ್ ೧೭ರಂದು ಸ್ಥಳ ಶುದ್ದಿ, ದೇವತಾ ಆವಾಹನ, ರಾಮತಾರಕ ಮಂತ್ರದ ಸಾಮೂಹಿಕ ಜಪಾರಂಭದ ನಂತರ ಬೆಳಿಗ್ಗೆ ೧೦ ಗಂಟೆಗೆ ರಾಮತಾರಕ ಮಂತ್ರದ ಹವನ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ, ರಾಮರಕ್ಷಾ ಪಠಣ, ರಾಮ ಜನೋತ್ಸವ, ತೊಟ್ಟಿಲು ಸೇವೆ ಜರುಗುವುದು. ೧ ಗಂಟೆಗೆ ಮಹಾಮಂಗಳಾರತಿ, ಮಹಾ ಸಂತರ್ಪಣೆ ನಡೆಯುವುದು. ರಾತ್ರಿ ೯ ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ರಾಮತಾರಕ ಮಂತ್ರ ಜಪ ಮಾಡುವವರು ಬಂದು ದೇವರ ಪ್ರೀತ್ಯರ್ಥ ಜಪ ಮಾಡಲು ಮತ್ತು ಹವನಕ್ಕೆ ಆಹುತಿ ಹಾಕಲು ಅವಕಾಶವಿದೆ. ರಾಮನವಮಿ ಮಹೋತ್ಸವ ಸಮಯದಲ್ಲಿ ಸೇವೆ ಮಾಡಿಸಲು ಇಚ್ಚಿಸುವ ಭಕ್ತಾಧಿಗಳು ಹೆಚ್ಚಿನ ವಿವರಗಳಿಗಾಗಿ ರಾಮಚಂದ್ರ ಭಟ್ಟ ಮೊ.ನಂ 8095297191 ಅವರನ್ನು ಸಂಪರ್ಕಿಸಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.