ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯ ನಾಗರಿಕರ ಬಹು ವರ್ಷಗಳ ಬೇಡಿಕೆಯಾದ ರಾಜಕಾಲುವೆ ನಿರ್ಮಾಣದ ಕಾಮಗಾರಿಯು ಮಹಾನಗರ ಪಾಲಿಕೆಯ 2022- 23ರ ಎಸ್ .ಎಫ್. ಸಿ ವಿಶೇಷ ಅನುದಾನದ ಒಂದು ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಂಡಿದೆ.

ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಇಂದು ಈ ರಾಜಕಾಲುವೆಯನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ರಸ್ತೆ (ಜೈಲ್ ರಸ್ತೆ) ಯ ಮುಖ್ಯ ಸೇತುವೆಯನ್ನು ತತಕ್ಷಣವೇ ವಿಶೇಷ ಅನುದಾನಕ್ಕಾಗಿ ವರದಿ ಸಿದ್ಧಪಡಿಸಿ ನೂತನ ಸೇತುವೆಯನ್ನು ನಿರ್ಮಾಣ ಮಾಡಲು ಹಾಗೂ ರಾಜುಕಾಲುವೆ ಮೇಲ್ಭಾಗ ಕವರಿಂಗ್ ಸ್ಲಾಬ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯೆ ರೇಖಾ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಆರ್ ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಯುವ ಮುಖಂಡರಾದ ಕೆ ರಂಗನಾಥ್, ಪ್ರಮುಖರಾದ ಕಲಗೋಡು ರತ್ನಾಕರ್, ಎಂ ಪ್ರವೀಣ್ ಕುಮಾರ್ , ಹೆಚ್.ಪಾಲಾಕ್ಷಿ, ಎಸ್.ಎಂ ಶರತ್, ಹೆಚ್ ಪಿ ಗಿರೀಶ್, ಬಿ.ಲೋಕೇಶ್, ಎಸ್.ಕುಮರೇಶ್, ಬಡಾವಣೆಯ ಪ್ರಮುಖರಾದ ಬಸವರಾಜ್ , ಚಂದ್ರು ಗೆಡ್ಡೆ , ಪ್ರಕಾಶ್, ಕೆ ಎಲ್ ಪವನ್, ಇತರರು ಇದ್ದರು.