ಭಟ್ಕಳ: ರಾಷ್ಟ್ರೀಯ ಲೋಕ ಅದಾಲತ್ ಪ್ರಯುಕ್ತ ಭಟ್ಕಳದ ಮೂರು ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಲೋಕ ಅದಾಲತ್ ಯಶಸ್ವಿಯಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ಒಟ್ಟೂ ೧೭೭ ಪ್ರಕರಣಗಳು ರಾಜೀ ಸಂಧಾನಕ್ಕೆ ಬಂದಿದ್ದವು. ಅವುಗಳಲ್ಲಿ ಒಟ್ಟೂ ೧೭೦ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಮೋಟಾರು ವಾಹನ ಕಾಯಿದೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ಒಟ್ಟೂ ರೂ.೪೬,೪೭,೩೯೯ನ್ನು ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ.
ಇದನ್ನೂ ಓದಿ : ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಚಿಂತನೆ : ರಾಜು ಕಾಗೆ
ಪ್ರಧಾನ ಸಿವಿಲ ನ್ಯಾಯಾಲದಲ್ಲಿ ಒಟ್ಟೂ ೪೪೭ ಪ್ರಕರಣಗಳಲ್ಲಿ ೪೧೨ ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಮೋಟಾರು ವಾಹನ ಕಾಯಿದೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಒಟ್ಟೂ ರೂ.೯೭,೮೧,೧೩೩ನ್ನು ಪರಿಹಾರದ ರೂಪದಲ್ಲಿ ಕಕ್ಷಿದಾರರಿಗೆ ಕೊಡಿಸಲಾಗಿದೆ.
ಇದನ್ನೂ ಓದಿ : ನೀರು ತುಂಬಿದ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟೂ ೫೪೭ ಪ್ರಕರಣಗಳು ರಾಜೀ ಸಂಧಾನಕ್ಕೆ ಬಂದಿದ್ದವು. ಅವುಗಳಲ್ಲಿ ಒಟ್ಟೂ ೫೩೭ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಮೋಟಾರು ವಾಹನ ಕಾಯಿದೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಒಟ್ಟೂ ರೂ.೧,೯೨,೦೦,೫೧೧ನ್ನು ಪರಿಹಾರದ ರೂಪದಲ್ಲಿ ಕಕ್ಷಿದಾರರಿಗೆ ಕೊಡಿಸಲಾಗಿದೆ.
ಇದನ್ನೂ ಓದಿ : ರೈಲ್ವೆ ಅಭಿವೃದ್ಧಿ ಕುರಿತಾಗಿ ಶಾಸಕ ದಿನಕರ ಶೆಟ್ಟಿ ಚರ್ಚೆ
ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಧನವತಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು. ವಕೀಲರ ಸಂಘದ ಅಧ್ಯಕ್ಷ ಗಣೇಶ ಎಂ. ದೇವಾಡಿಗ, ವಕೀಲರಾದ ಆರ್.ಆರ್.ಶ್ರೇಷ್ಟಿ, ಜೆ.ಡಿ.ನಾಯ್ಕ, ಎಂ.ಎಲ್. ನಾಯ್ಕ, ನಾಗರಾಜ ಈ.ಎಚ್., ಎಸ್.ಬಿ. ಬೊಮ್ಮಾಯಿ, ಮಹೇಶ ನಾಯ್ಕ, ಎಂ.ಟಿ.ನಾಯ್ಕ, ದುರ್ಗಪ್ಪ ಮೊಗೇರ, ಈಶ್ವರ ನಾಯ್ಕ, ರವೀಂದ್ರ, ಕಮಲಾಕರ, ದುರ್ಗೇಶ ವೈದ್ಯ, ಪರಮೇಶ್ವರ ಗೊಂಡ, ತಮೀಮ್, ಸಾವೇರ ಲೂಯೀಸ, ಸಹಾಯಕ ಸರಕಾರಿ ಅಭಿಯೋಜಕ ವಿವೇಕ ನಾಯ್ಕ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.