ಭಟ್ಕಳ :ಇಲ್ಲಿನ ಪ್ರಖ್ಯಾತ ಐಸಿಎಸ್ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಅವಾರ್ಡ್ಸ್ ಕೊಡಮಾಡುವ ೨೦೨೪ನೇ ಸಾಲಿಗೆ “ಮೋಸ್ಟ ಇನ್ನೋವೇಟಿವ್ ಶಾಲೆ” ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಆ ಮೂಲಕ ಸಾಧನೆಯ ಹೊಸ ಮೈಲುಗಲ್ಲನ್ನು ಸಾಧಿಸಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಾರತದಾದ್ಯಂತ ಸಾವಿರಾರು ಪ್ರಖ್ಯಾತ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ನಾಮ ನಿರ್ದೆಶನಗೊಂಡು ಅಂತಿಮವಾಗಿ “ಮೋಸ್ಟ್ ಇನ್ನೋವೇಟಿವ್” ಪ್ರಶಸ್ತಿಗೆ ಭಾಜನರಾಗಿರುವುದು ವಿದ್ಯಾಂಜಲಿ ಪಬ್ಲಿಕ್ ಶಾಲೆಯ ತಂತ್ರಜ್ಞಾನ ಕೇಂದ್ರಿತ ಪಠ್ಯ-ಪಠ್ಯೇತರ ಚಟುವಟಿಕೆಯ ಗುಣಮಟ್ಟ ಹಾಗೂ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಲೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಶಾಲಾ ಮಕ್ಕಳಿಗಾಗಿ ಉಚಿತ ದಂತ ತಪಾಸಣಾ ಶಿಬಿರ ಯಶಸ್ವಿ
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ , ಭಟ್ಕಳದ ಸುತ್ತ ಮುತ್ತಲಿನ ಜನರಿಗೆ ಗುಣಮಟ್ಟದ ಐಸಿಎಸ್ಇ ಶಿಕ್ಷಣವನ್ನು ನೀಡಬೇಕೆಂದು ನಿರ್ಧರಿಸಿತ್ತು. ೨೦೦೮-೦೯ರಲ್ಲಿ ಆರಂಭಿಸಿದ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಇಷ್ಟು ಅಲ್ಪ ಅವಧಿಯಲ್ಲಿ ಸಾಧನೆಯ ಹೊಸ ಶಿಖರವನ್ನು ಏರಿರುವುದು ಸ್ಮರಣೀಯ ಸಂಗತಿಯಾಗಿದೆ. ಇದರೊಂದಿಗೆ ಸಂಸ್ಥೆಯ ಮುಖ್ಯಸ್ಥರ ಮಾರ್ಗದರ್ಶನ, ಪಾಲಕರ ನಿರಂತರ ಸಹಕಾರ ಹಾಗೂ ಶಿಕ಼ಕರ ಅವಿರತ ಶ್ರಮದಿಂದಾಗಿ ಕಳೆದ ೧೦ ವರ್ಷಗಳಿಂದ ೧೦ನೇ ತರಗತಿಯ ವಾರ್ಷಿಕ ಪರೀಕೆ಼ಯಲ್ಲಿ ಸತತ ೧೦೦% ಫಲಿತಾಂಶ ದಾಖಲಿಸುತ್ತಾ ಬಂದಿದೆ ಎಂದು ಪಾಲಕರು, ಊರ ನಾಗರಿಕರು ಹಾಗೂ ಹಿತೈಷಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.