ಭಟ್ಕಳ : ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ಯುವ ಮತದಾರರಲ್ಲಿ ಮತದಾನದ ಅರಿವು ಮೂಡಿಸಲು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಎನ್.ಎಸ್.ಎಸ್ ಘಟಕ, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಕೌಶಲ್ಯಾಭಿವೃದ್ಧಿ ಒಡಂಬಡಿಕೆ ಹೊಂದಿದ ಸಂಸ್ಥೆಯಾದ ದೇಶಪಾಂಡೆ ಸ್ಕಿಲ್ಲಿಂಗ್ ನ ವಿದ್ಯಾರ್ಥಿಗಳಿಂದ ವಿಭಿನ್ನವಾದ ಜಾಗೃತಿ ಕಾರ್ಯಕ್ರಮವು ಜರುಗಿತು.

ಇದನ್ನೂ ಓದಿ : ಬಿಜೆಪಿ ಭಟ್ಕಳ ಮಂಡಲ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ತಾಲೂಕಿನ ಮಾವಿನಕುರ್ವೆ ಕಡಲತೀರದಲ್ಲಿ “ಪ್ಲೀಸ ಮೇಕ ದ ರೈಟ್ ವೋಟ್”, “ಮತದಾನ ಮಾಡೋಣ” ಭಿತ್ತಿಚಿತ್ರವನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ನಾವು ಮತದಾನ ಮಾಡುವೆವು, ಇತರರಿಗೂ ಪ್ರೇರಣೆ ನೀಡುವೆವು ಎಂದು ಪ್ರತಿಜ್ಞೆ ಸ್ವೀಕರಿಸಿದರು. ಕಾಲೇಜು ಪ್ರಾಚಾರ್ಯ ಶ್ರೀನಾಥ ಪೈ ಅವರು, ಸ್ವೀಪ್ ಮೂಲಕ ಮತದಾನದ ಕುರಿತು ಆನಲೈನ್ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಈ ವಿಡಿಯೋ ನೋಡಿ : ಖಾನಾಪುರದಲ್ಲಿ ಕಾಡಾನೆ ಪ್ರತ್ಯಕ್ಷ

ಮತದಾನದ ಅರಿವು ಜಾಥಾ ಮುಖೇನ ಮಾವಿನಕುರ್ವೆ ಗ್ರಾಮ ಪಂಚಾಯತ ವ್ಯಾಪ್ತಿಯ ಮನೆ, ಬಂದರು, ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಸರ್ವರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.


ವಿದ್ಯಾರ್ಥಿಗಳಿಂದ ನಡೆದ ಈ ಜಾಥಾದಲ್ಲಿ ಎನ್.ಎಸ್.ಎಸ್. ಘಟಕದ ಸಂಯೋಜಕ ಶಾಂತರಾಯ ಗೊಂಡ, ವಿನಾಯಕ ನಾಯ್ಕ, ಪ್ರಾಧ್ಯಾಪಕರು, ತರಬೇತುದಾರರಾದ ಸೆಸಿಲಿಯಾ ಪಿಂಟೋ, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.