ಗ್ರಾಮ ಆಡಳಿತ ವಿರುದ್ಧ ಕುಟುಂಬಸ್ಥರಿಂದ ದೂರು ದಾಖಲು

ಶಿವಮೊಗ್ಗ :  ಹೊಸನಗರ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಆನೆಗದ್ದೆಯಲ್ಲಿ ಗ್ರಾಪಂ ನೀರಗಂಟಿ ವಿದ್ಯುತ್ ತಗುಲಿ ಸಾವನ್ನಪ್ಪಿ ಮತ್ತೊರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ನಾಗರಹಳ್ಳಿ ನಿವಾಸಿ ನಾರಾಯಣ್ ಎಸ್ ಸಿ (60) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಗ್ರಾಪಂ ಅಟೆಂಡರ್ ಶ್ರೀಧರ್ ಗೆ ಗಂಭೀರ ಗಾಯಗಳಾಗಿವೆ.

ನಾರಾಯಣ ಎಸ್. ಸಿ ರವರು ವ್ಯವಸಾಯ ಕೆಲಸದೊಂದಿಗೆ ಹುಂಚಾ ಗ್ರಾಮ ಪಂಚಾಯ್ತಿಯಲ್ಲಿ ಈಗ 1 ವರ್ಷದಿಂದ ನೀರಘಂಟಿ ಕೆಲಸ ಮಾಡಿಕೊಂಡಿದ್ದು, ಅಲ್ಲದೇ ಗ್ರಾಮ ಪಂಚಾಯ್ತಿಯ ಬೀದಿ ದೀಪಗಳನ್ನು ವಿದ್ಯುತ್ ಕಂಬಕ್ಕೆ ಅಳವಡಿಸುವ ಕೆಲಸವನ್ನು ಮಾಡಿಕೊಂಡಿದ್ದು, ಗ್ರಾಮ ಪಂಚಾಯ್ತಿಯವರು. ಇದಕ್ಕೆ ಹಣವನ್ನು ಕೊಡುತ್ತಿದ್ದರು.

ಗ್ರಾಮ ಪಂಚಾಯ್ತಿಯ ವತಿಯಿಂದ ಹುಂಚಾದ ಆನೆಗದ್ದೆಯಲ್ಲಿ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳನ್ನು ಹಾಕುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಕೋಣಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾಗಿ ತಿಳಿಸಿರುತ್ತಾರೆ. ನಂತರ ಶವವನ್ನು ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಶವಾಗಾರದಲ್ಲಿರಿಸಿದ್ದಾರೆ.

ಹುಂಚಾ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವರ್ಗ ಹಾಗೂ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ  ಕುಟುಂಬ ವರ್ಗದವರು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.