ಯಲ್ಲಾಪುರ : ಜ್ಞಾನವೇ ಶ್ರೇಷ್ಠವಾದ ಸಂಪತ್ತು ಎಂಬ ಧ್ಯೇಯದೊಂದಿಗೆ ಸದಾ ಸಂಸ್ಕಾರಯುತ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ಮುಂಚೂಣಿಯಲ್ಲಿ ಸಾಗುತ್ತಿದೆ. ನಮ್ಮ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಪ್ರತಿವರ್ಷವೂ ಶಿಕ್ಷಕರ ಕಲಿಕಾ ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿಗಾಗಿ ತರಬೇತಿ ಕಾರ್ಯಗಾರವನ್ನು ಆಯೋಜಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಎರಡು ದಿನಗಳ ಕಾಲ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರಗಳಲ್ಲಿ ದೊರೆಯುವ ಉತ್ತಮ ಗುಣಾತ್ಮಕ ಶಿಕ್ಷಣ ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಗಬೇಕು ಎಂಬ ಉದ್ದೇಶದೊಂದಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ಸದಾ ಅಗತ್ಯ, ರಚನಾತ್ಮಕವಾದ ಚಟುವಟಿಕೆ ಮತ್ತು ಕಾರ್ಯಕ್ರಮಗಳೊಂದಿಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ :  ಮೇ ೩೦ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ನಿವೃತ್ತ ಉಪನ್ಯಾಸಕ ಎಂ ಎನ್ ಹೆಗಡೆ, ಪ್ರಾಂಶುಪಾಲೆ ಮಹಾದೇವಿ ಭಟ್, ಪಿ.ಯು. ವಿಭಾಗದ ಪ್ರಾಚಾರ್ಯ ಡಿ.ಕೆ.ಗಾಂವ್ಕರ್, ಸಂಸ್ಥೆಯ ವ್ಯವಸ್ಥಾಪಕ ಅಜಯ್ ಭಾರತೀಯ, ವಿಶ್ವದರ್ಶನ ಕೇಂದ್ರೀಯ ಶಾಲೆಯ ಉಪ ಪ್ರಾಂಶುಪಾಲೆ ಆಸ್ಮಾ ಶೇಖ್ ಹಾಗೂ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮೀನುಗಾರಿಕೆಗೆ ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಮೀನುಗಾರ ಸಾವು

ರಾಷ್ಟ್ರೋತ್ಥಾನ ಪರಿಷತ್ ನ ‘ಪ್ರಶಿಕ್ಷಣ ಭಾರತೀ’ ಸಹಯೋಗದಲ್ಲಿ ಪಂಚಮುಖಿ ಶಿಕ್ಷಣದ ಪ್ರಾಮುಖ್ಯತೆ, ಶಿಕ್ಷಕರು ತರಗತಿಗಳಲ್ಲಿ ಪಂಚಮುಖಿ ಶಿಕ್ಷಣದ ಅಂಶಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಅದನ್ನು ಕಲಿಸುವ ಪದ್ಧತಿಗಳ ಕುರಿತು ಎರಡು ದಿನ ತರಬೇತಿ ನಡೆಯಿತು.

ಇದನ್ನೂ ಓದಿ : ಎಐಟಿಎಂ ಕಾಲೇಜಿಗೆ ಶೇ. 100 ಫಲಿತಾಂಶ

ಮೊದಲ ದಿನ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಉಪನ್ಯಾಸಕ ಎಂ.ಎನ್.ಹೆಗಡೆ ಅವರು ‘ಸಂತೋಷದಾಯಕ ತರಗತಿ ನಿರ್ವಹಣೆ’, ಉಪನ್ಯಾಸಕ ಡಾ. ಮಹೇಶ್ ಭಟ್ ಇವರು ‘ಪಂಚಮುಖಿ ಶಿಕ್ಷಣ, ಸನಾತನ ಶಿಕ್ಷಣ ಪದ್ಧತಿ’, ಕೀರ್ತಿವತಿ ಮಾತಾಜಿಯವರು ‘ಕಲಿಕಾ ಚಟುವಟಿಕೆ ಆಧಾರಿತ ತರಗತಿ ನಿರ್ವಹಣೆ’ ವಿಷಯಗಳ ಕುರಿತು ತರಬೇತಿ ನೀಡಿದರು.

ಇದನ್ನೂ ಓದಿ : ದರೋಡೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

ಎರಡನೇ ದಿನ ಬೆಂಗಳೂರಿನ ಮ್ಯಾಕ್ ಮಿಲನ್ ಸಂಸ್ಥೆಯಿಂದ ‘ತರಗತಿ ನಿರ್ವಹಣೆಯಲ್ಲಿ ಶಿಕ್ಷಕರ ಪಾತ್ರ’ ಮತ್ತು ಮ್ಯಾಕ್ ಮಿಲನ್ ಸಂಸ್ಥೆಯ ಪಠ್ಯ ಪುಸ್ತಕಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು. ಶಿಕ್ಷಕರು ತಮ್ಮ ಕಲಿಕಾ ಕೌಶಲ್ಯವನ್ನು ಹೆಚ್ಚಿಸಿಕೊಂಡು ತರಗತಿಯನ್ನು ಸುಗಮ ಗೊಳಿಸುವ ಕುರಿತು ತರಬೇತಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅನುಭವಿ ಪ್ರಾಚಾರ್ಯೆ ಸುಜಾತ ಹಿರೇಮಠ ಭಾಗವಹಿಸಿದ್ದರು.