ಭಟ್ಕಳ: ಶಿರಸಿಯ ವೃಕ್ಷಲಕ್ಷ ಆಂದೋಲನ ಆಶ್ರಯದಲ್ಲಿ ಪರಿಸರ ಸಂರಕ್ಷಣೆ-ಸುಸ್ಥಿರ ಅಭಿವೃದ್ಧಿ ರಾಜ್ಯ ಸಮ್ಮೇಳನವನ್ನು ಜೂ.೨೩ರಂದು ರವಿವಾರ ಶಿರಸಿಯ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರವಾದಿ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಇದರ ಬಗ್ಗೆ ಮಾಹಿತಿ ನೀಡಿದರು. ಶಿರಸಿಯಲ್ಲಿ ವೃಕ್ಷಲಕ್ಷ ಆಂದೋಲನದ ಆಶ್ರಯದಲ್ಲಿ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲು ನಿಶ್ಚಯಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ವಿಷಯ ತಜ್ಞರು, ಸಾಮಾಜಿಕ ಮುಖಂಡರು, ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಮ್ಮೇಳನದ ಶುಭ ಸಂದರ್ಭದಲ್ಲಿ, ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ರಾಜ್ಯ ದೇಶದ ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜಸೇವಾ ಕಾರ್ಯಗಳಲ್ಲಿ ನಿರಂತರವಾಗಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ಹಿರಿಯ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ : ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು ಹಿನ್ನೆಲೆ ಭಟ್ಕಳದಲ್ಲಿ ಸಂಭ್ರಮಾಚರಣೆ
ಸಮಾವೇಶದಲ್ಲಿ ರಾಜ್ಯ ಮಟ್ಟದ ಪರಿಸರ ಕಾರ್ಯಕರ್ತರ ಸಮಾವೇಶ, ಅನಂತ ಹೆಗಡೆ ಅಶೀಸರ ಅಭಿನಂದನಾ ಗ್ರಂಥ “ವೃಕ್ಷಮಿತ್ರ” ಲೋಕಾರ್ಪಣೆ, “ವೃಕ್ಷಲಕ್ಷ” ಪ್ರಶಸ್ತಿ ಪ್ರದಾನ, ವೃಕ್ಷಲಕ್ಷ ಆಂದೋಲನ ಸಾಗಿಬಂದ ದಾರಿ ಅವಲೋಕನ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಪ್ರಸಕ್ತ ಸವಾಲುಗಳ ಚಿಂತನಗೋಷ್ಟಿ, ಪರಿಸರ ಹೋರಾಟಗಳ ಪ್ರದರ್ಶಿನಿ ಇರಲಿದೆ.
ಇದನ್ನೂ ಓದಿ : ಸಂತಾಪ ಸೂಚಕ ಸಭೆಯಲ್ಲಿ ಮಾದೇವ ನಾಯ್ಕರ ಗುಣಗಾನ
ಕಾರ್ಯಕ್ರಮದಲ್ಲಿ ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀಮದ್ ಗಮಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಇರಲಿದೆ. ಸಮ್ಮೇಳನಕ್ಕೆ ವಿಶೇಷ ಅತಿಥಿಯಾಗಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿವರ ದಿವ್ಯ ಉಪಸ್ಥಿತಿ ಇರಲಿದೆ. ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯ ಅತಿಥಿಗಳಾಗಿ ಕೇಂದ್ರ ಸರಕಾರದ ನ್ಯಾಶನಲ್ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ. ಬಿ.ಎನ್. ಗಂಗಾಧರ, ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚ.ಮೂ. ಕೃಷ್ಣ ಶಾಸ್ತ್ರಿ, ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಡಾ. ವಿಜಯಲಕ್ಷ್ಮಿ ದೇಶಮಾನೆ, ವಿಜ್ಞಾನ ಲೇಖಕ ನಾಗೇಶ ಹೆಗಡೆ, ಡಾ. ವಾಮನ ಆಚಾರ್ಯ, ವೈ.ಜಿ.ರಾಮಕೃಷ್ಣ, ಡಾ. ಟಿ.ವಿ. ರಾಮಚಂದ್ರ, ಡಾ. ಎಂ.ಡಿ. ಸುಭಾಶ್ಚಂದ್ರನ್, ಶ್ರೀಧರ ಸಾಗರ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಜೂನ್ ೨೧ರಿಂದ
ಸಮ್ಮೇಳನಕ್ಕೆ ಪರಿಸರ ಪ್ರೇಮಿಗಳು, ರಾಜ್ಯದ ನಾಗರಿಕರು ಆಗಮಿಸಿ ಯಶಸ್ಸಿಗೆ ಸಹಕರಿಸುವಂತೆ ಅಧ್ಯಕ್ಷ ಪ್ರೊ.ಜಿ.ಎಂ.ಕುಮಾರಸ್ವಾಮಿ, ಉಪಾಧ್ಯಕ್ಷ ಶಾಂತಾರಾಮ ಸಿದ್ಧಿ, ಸಂಚಾಲಕರುಗಳಾದ ನಾರಾಯಣ ಹೆಗಡೆ ಗಡಿಕೈ, ವಿಶ್ವೇಶ್ವರ ಭಟ್ಟ ಕೋಟೆಮನೆ, ಡಾ. ಕೇಶವ ಎಚ್. ಕೋರ್ಸೆ ಮುಂತಾದವರು ಆಗ್ರಹಿಸಿದ್ದಾರೆ.